ನಕಲಿ ಟಿಆರ್ಪಿ ಹಗರಣ: ಅರ್ನಬ್ ಆರೋಪಿ; 2ನೇ ಚಾರ್ಜ್ಶೀಟ್ನಲ್ಲಿ ಉಲ್ಲೇಖ

ಮುಂಬೈ: ನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮಂಗಳವಾರ ಎರಡನೇ ಚಾರ್ಜ್ಶೀಟ್ ಸಲ್ಲಿಸಿದ್ದು, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ.
ಹಗರಣ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ನ ಕ್ರೈಂ ಇಂಟೆಲಿಜೆನ್ಸ್ ಯುನಿಟ್ (ಸಿಐಯು) ಈ ಚಾರ್ಜ್ಶೀಟನ್ನು ಸಲ್ಲಿಸಿದೆ.
‘ಚಾರ್ಜ್ಶೀಟ್ನಲ್ಲಿ ಹಲವು ಆರೋಪಿಗಳ ಹೆಸರುಗಳಿದ್ದು, ಅರ್ನಬ್ ಗೋಸ್ವಾಮಿ ಹಾಗೂ ಎಆರ್ಜಿ ಔಟ್ಲಿಯರ್ ಸಂಸ್ಥೆಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ’ ಎಂದು ಗೋಸ್ವಾಮಿ ಪರ ವಕೀಲರು ತಿಳಿಸಿದ್ದಾರೆ.
ನಕಲಿ ಟಿಆರ್ಪಿ ಹಗರಣ ಕಳೆದ ವರ್ಷ ಅಕ್ಟೋಬರ್ನಲ್ಲಿ ಬೆಳಕಿಗೆ ಬಂತು. ಕೆಲವು ಚಾನೆಲ್ಗಳು ಟಿಆರ್ಪಿ ಮಾಹಿತಿಯನ್ನು ತಿರುಚಿವೆ ಎಂದು ಆರೋಪಿಸಿದ್ದ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಿಎಆರ್ಸಿ), ಹನ್ಸ ರಿಸರ್ಚ್ ಗ್ರೂಪ್ (ಎಚ್ಆರ್ಜಿ) ಮೂಲಕ ದೂರು ಸಲ್ಲಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.