ಗುರುವಾರ , ಅಕ್ಟೋಬರ್ 29, 2020
28 °C

ರೈತರನ್ನು ಉದ್ಯಮಶೀಲರನ್ನಾಗಿಸುವ ಕೃಷಿ ಮಸೂದೆಗಳು: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ’ನಮ್ಮ ಸರ್ಕಾರದ ನೂತನ ಕೃಷಿ ಮಸೂದೆಗಳು ರೈತರನ್ನು ’ಅನ್ನದಾತ’ನ ಪಾತ್ರದಿಂದ ಉದ್ಯಮಶೀಲತೆಯತ್ತ ಕೊಂಡೊಯ್ದು, ಅವರ ಆದಾಯವನ್ನು ಹೆಚ್ಚಿಸಲಿವೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಕೇಂದ್ರದ ಮಾಜಿ ಸಚಿವ ಬಾಲಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆ  ಬಿಡುಗಡೆಗೊಳಿಸಿ, ಅಹಮದ್‌ನಗರ ಜಿಲ್ಲೆಯ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿಗೆ ಮರುನಾಮಕರಣ ಮಾಡಿದ ನಂತರ ಅವರು ಮಾತನಾಡಿದರು. 

’ಗುಜರಾತ್, ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು, ಸಕ್ಕರೆ ಮತ್ತು ಗೋಧಿ ಉತ್ಪಾದನೆ ಉಲ್ಲೇಖಿಸಿದ ಮೋದಿ ಅವರು, ’ ಇಂಥ ಸ್ಥಳೀಯ ಉದ್ಯಮ ಮಾದರಿಗಳು ದೇಶವನ್ನು ಮುಂದೆ ಕೊಂಡೊಯ್ಯುತ್ತವೆ’ ಎಂದು ಹೇಳಿದರು.

’ಸ್ವಾತಂತ್ರ್ಯದ ನಂತರ ದೇಶದಲ್ಲಿ ಸಾಕಷ್ಟು ಆಹಾರ ಸಂಗ್ರಹವಿರಲಿಲ್ಲ. ಆಗ ಸರ್ಕಾರ ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿತ್ತು. ಆ ಸಮಯದಲ್ಲಿ ರೈತರು ಆಹಾರ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಿದ್ದರು. ರೈತರು ಆಹಾರ ಉತ್ಪಾದನೆಯತ್ತ ಕಾಳಜಿವಹಿಸಿದ್ದಾಗ, ಸರ್ಕಾರಗಳು ರೈತರ ಆದಾಯ ಹೆಚ್ಚಿಸುವಂತಹ ನೀತಿ ರೂಪಿಸಲಿಲ್ಲ. ಜನರೂ, ರೈತರ ಆದಾಯದ ಬಗ್ಗೆ ಯೋಚಿಸುವುದನ್ನು ಮರೆತರು. ಮೊದಲ ಬಾರಿಗೆ ಈ ಆಲೋಚನೆಯನ್ನು ಬದಲಾಯಿಸಿದ್ದೇವೆ’ ಎಂದು ರೈತರ ಕಲ್ಯಾಣಕ್ಕಾಗಿ ಕೇಂದ್ರ ಕೈಗೊಂಡ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು