ಬುಧವಾರ, ಆಗಸ್ಟ್ 17, 2022
25 °C

ರೈತರ ಬೇಡಿಕೆಗಳು ಒಪ್ಪುವಂಥದ್ದು, ನಾವು ಬೆಂಬಲಿಸುತ್ತೇವೆ: ಅರವಿಂದ ಕೇಜ್ರಿವಾಲ್

ಎಎನ್‌ಐ Updated:

ಅಕ್ಷರ ಗಾತ್ರ : | |

Arvind kejriwal

ನವದೆಹಲಿ: ರೈತರ ಸಮಸ್ಯೆಗಳು ಮತ್ತು ಅವರಿಟ್ಟಿರುವ ಬೇಡಿಕೆ ಒಪ್ಪುವಂಥದ್ದು. ನಾವು ಅದನ್ನು ಬೆಂಬಲಿಸುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

‘ನನ್ನ ಪಕ್ಷ ಮತ್ತು ನಾನು ಆರಂಭದಿಂದಲೂ ರೈತರ ಪರ ನಿಂತಿದ್ದೇವೆ. ಅವರ ಪ್ರತಿಭಟನೆಯ ಆರಂಭದಲ್ಲಿ, 9 ಸ್ಟೇಡಿಯಂಗಳನ್ನು ಜೈಲುಗಳನ್ನಾಗಿ ಪರಿವರ್ತಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದರು. ನನ್ನ ಮೇಲೆ ಒತ್ತಡವಿದ್ದರೂ ನಾನದಕ್ಕೆ ಅನುಮತಿ ನೀಡಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: 

ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ–ಹರಿಯಾಣದ ಸಿಂಘು ಗಡಿಗೆ ಭೇಟಿ ನೀಡಿದ ಅವರು ‘ಗುರು ತೇಗ್ ಬಹಾದುರ್’ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿದ ಅವರು, ಅವರಿಗೆ ಒದಗಿಸಲಾಗಿರುವ ವ್ಯವಸ್ಥೆಯ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.

‘ನಮ್ಮ ಪಕ್ಷದ ಶಾಸಕರು, ನಾಯಕರು ಸೇವಕರಾಗಿ ರೈತರ ಸೇವೆ ಮಾಡುತ್ತಿದ್ದಾರೆ. ನಾನಿಲ್ಲಿಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ಸೇವಕನಾಗಿ ಬಂದಿದ್ದೇನೆ. ರೈತರು ಇಂದು ಸಂಕಷ್ಟದಲ್ಲಿದ್ದು, ನಾವು ಅವರ ಜತೆ ನಿಲ್ಲಬೇಕು. ಡಿಸೆಂಬರ್ 8ರ ಬಂದ್‌ಗೆ ಎಎಪಿ ಬೆಂಬಲ ನೀಡಿದೆ. ಪಕ್ಷದ ಕಾರ್ಯಕರ್ತರು ದೇಶದಾದ್ಯಂತ ಬಂದ್‌ ಆಚರಿಸಲಿದ್ದಾರೆ’ ಎಂದೂ ಕೇಜ್ರಿವಾಲ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು