ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'18 ವರ್ಷ ತುಂಬಿದೆ ಎಂಬ ಕಾರಣಕ್ಕೆ ತಂದೆ ಜವಾಬ್ದಾರಿಯಿಂದ ಮುಕ್ತನಾಗುವುದಿಲ್ಲ’

Last Updated 17 ಅಕ್ಟೋಬರ್ 2021, 16:52 IST
ಅಕ್ಷರ ಗಾತ್ರ

ನವದೆಹಲಿ: ‘ಮಗನಿಗೆ 18 ವಯಸ್ಸು ತುಂಬಿದೆ ಎಂಬ ಕಾರಣಕ್ಕೆ ಆತನ ಶಿಕ್ಷಣದ ವೆಚ್ಚವನ್ನು ಭರಿಸುವ ಜವಾಬ್ದಾರಿಯಿಂದ ತಂದೆ ಮುಕ್ತನಾಗಲು ಸಾಧ್ಯವಿಲ್ಲ’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಮಗ ತನ್ನ ಪದವಿ ಶಿಕ್ಷಣ ಪೂರ್ಣಗೊಳಿಸುವವರೆಗೆ ಅಥವಾ ಆತ ಸಂಪಾದಿಸಲು ಆರಂಭಿಸುವ ತನಕ ತನ್ನ ವಿಚ್ಛೇದಿತ ಪತ್ನಿಗೆ ಪ್ರತಿ ತಿಂಗಳು ಗಂಡ ₹15,000 ನೀಡಬೇಕೆಂದು ಈ ಹಿಂದೆ ಹೈಕೋರ್ಟ್‌ ಆದೇಶಿಸಿತ್ತು.

ಈ ಆದೇಶವನ್ನು ಮರುಪರಿಶೀಲಿಸುವಂತೆ ವ್ಯಕ್ತಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಈ ಮನವಿಯನ್ನುನ್ಯಾಯಾಲಯವು ತಿರಸ್ಕರಿಸಿದೆ.

‘ಮಕ್ಕಳು ಸಮಾಜದಲ್ಲಿ ತಮ್ಮ ಸ್ಥಾನವನ್ನು ಸಾಧಿಸಲು ಸಮರ್ಥರಾಗುವವರೆಗೆ ತಾಯಿಯೊಂದಿಗೆ ತಂದೆಯೂ ಮಕ್ಕಳ ಆರ್ಥಿಕ ಹೊರೆಯನ್ನು ಹೊತ್ತುಕೊಳ್ಳಬೇಕು. ಮಗನಿಗೆ 18 ವರ್ಷ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ ತಾಯಿಯೇ ಆತನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲಿ ಎಂಬುದು ಸರಿಯಲ್ಲ’ ಎಂದು ನ್ಯಾಯಾಲಯ ಹೇಳಿದೆ.

‘ಮಕ್ಕಳ ಆರ್ಥಿಕ ಹೊರೆಯನ್ನು ಭರಿಸುವುದು ತಂದೆ–ತಾಯಿಯ ಸಮಾನ ಕರ್ತವ್ಯ. ಕೇವಲ ತಾಯಿಯೇ ಅವರ ವೆಚ್ಚವನ್ನು ನೋಡಿಕೊಳ್ಳುವಂತಹ ಪರಿಸ್ಥಿತಿ ಬರಬಾರದು’ ಎಂದು ನ್ಯಾಯಾಲಯ ಹೇಳಿದೆ.

ಈ ದಂಪತಿಯು 1997, ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2011, ನವೆಂಬರ್‌ನಲ್ಲಿ ದಂಪತಿ ವಿಚ್ಛೇದನ ಪಡೆದರು. ದಂಪತಿಯ ಮಗ ಮತ್ತು ಮಗಳ ವಯಸ್ಸು ಕ್ರಮವಾಗಿ 18 ಹಾಗೂ 20.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT