ನವದೆಹಲಿ: ಸಿಬಿಐ ಕಟ್ಟಡದಲ್ಲಿ ಬೆಂಕಿ ಅವಘಢ

ನವದೆಹಲಿ: ಇಲ್ಲಿನ ಲೋಧಿ ರೋಡ್ ವ್ಯಾಪ್ತಿಯ ಸಿಜಿಒ ಕಾಂಪ್ಲೆಕ್ಸ್ನ ಸಿಬಿಐ ಕಚೇರಿಯಿರುವ ಕಟ್ಟಡದಲ್ಲಿ ಗುರುವಾರ ಬೆಳಿಗ್ಗೆ 11.36ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದ ಎರಡನೇ ನೆಲ ಅಂತಸ್ತಿನಲ್ಲಿರುವ ಟ್ರಾನ್ಸ್ಫಾರ್ಮರ್ ಮತ್ತು ಹವಾನಿಯಂತ್ರಕ ಘಟಕದ ಕೊಠಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತು.
ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಆರು ಸದಸ್ಯರ ತಂಡ ಬೆಂಕಿ ನಂದಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.