ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಪ್ರತ್ಯೇಕ ಎನ್‌ಕೌಂಟರ್, ಬಾಲಪರಾಧಿ ಸಹಿತ ಐವರು ಉಗ್ರರ ಹತ್ಯೆ

Last Updated 11 ಏಪ್ರಿಲ್ 2021, 11:31 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಬ್ಬ ಬಾಲಾಪರಾಧಿ ಸೇರಿದಂತೆ ಐವರು ಉಗ್ರರು ಹತರಾಗಿದ್ದಾರೆ.

‘ಶೋಪಿಯಾನ್ ಜಿಲ್ಲೆಯ ಚಿತ್ರಗಂನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾದರು. ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದಿದ್ದವು. ಇವರಲ್ಲಿ ಒಬ್ಬ ಬಾಲಪರಾಧಿಯೂ ಸೇರಿದ್ದಾನೆ’ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಬಾಲಾಪರಾಧಿಯನ್ನು 10ನೇ ತರಗತಿಯ ವಿದ್ಯಾರ್ಥಿ ಫೈಸಲ್ ಗುಲಾರ್ ಎಂದು ಗುರುತಿಸಲಾಗಿದೆ. ಈಚೆಗಷ್ಟೇ ಉಗ್ರರ ಸಂಘಟನೆಗೆ ಸೇರಿದ್ದ ಆತನ ಮನವೊಲಿಸಿ, ಶರಣಾಗುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಲಾಯಿತು. ಆದರೆ, ಆತನ ಸಹಚರರು ಆತನಿಗೆ ಹೊರಗೆ ಬರಲು ಅನುಮತಿ ನೀಡಲಿಲ್ಲ. ಹತರಾದ ಮೂವರು ಉಗ್ರರು ಸ್ಥಳೀಯ ಅಲ್–ಬದ್ರ್ ಸಂಘಟನೆಗೆ ಸೇರಿದವರು’ ಎಂದು ಕಾಶ್ಮೀರದ ಐಜಿಪಿ ವಿಜಯಕುಮಾರ್ ತಿಳಿಸಿದ್ದಾರೆ.

‘ನಾಲ್ವರು ಸಹೋದರಿಯರನ್ನು ಹೊಂದಿದ್ದ ಫೈಸಲ್ ಗುಲಾರ್ ಕಳೆದ ಮಂಗಳವಾರವಷ್ಟೇ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದ ಸೆಮ್‌ಥಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಶನಿವಾರ ರಾತ್ರಿ ನಡೆದ ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ. ಈ ಉಗ್ರರು ಎರಡು ದಿನಗಳ ಹಿಂದೆಯಷ್ಟೇ ಸೈನಿಕನೊಬ್ಬನನ್ನು ಕೊಂದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿ ಮೂರು ದಿನಗಳ ಅವಧಿಯಲ್ಲಿ ಒಟ್ಟು 12 ಉಗ್ರರನ್ನು ಕೊಲ್ಲಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT