ಗುರುವಾರ , ಅಕ್ಟೋಬರ್ 22, 2020
24 °C

ಕೇಂದ್ರದ ಮಾಜಿ ಸಚಿವ ರಶೀದ್‌ ಮಸೂದ್‌ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಹಾರನಪುರ (ಉತ್ತರ ಪ್ರದೇಶ): ಕೇಂದ್ರದ ಮಾಜಿ ಸಚಿವ ರಶೀದ್‌ ಮಸೂದ್ (73)‌ ಅವರು ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು.  

ಕೋವಿಡ್‌–19ನಿಂದ ಗುಣಮುಖರಾಗಿದ್ದ ಅವರು ಮತ್ತೆ ಅನಾರೋಗ್ಯಕ್ಕೀಡಾದ ಕಾರಣ, ರೂರ್‌ಕಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು ಎಂದು ಅವರ ಸಹೋದರನ ಮಗ ಇಮ್ರಾನ್‌ ಮಸೂದ್‌ ತಿಳಿಸಿದರು. 

‘ಇತ್ತೀಚೆಗೆ ರಶೀದ್‌ ಅವರಿಗೆ ಕೋವಿಡ್‌–19 ದೃಢಪಟ್ಟಿತ್ತು. ದೆಹಲಿಯ ಆಸ್ಪತ್ರೆಯೊಂದರಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗಿ ಮರಳಿದ್ದ ಅವರು ಸಹಾರನಪುರಕ್ಕೆ ಮರಳಿದ್ದರು. ಆದರೆ ಕೆಲ ದಿನಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತ್ತು’ ಎಂದು ಇಮ್ರಾನ್‌ ತಿಳಿಸಿದರು. 

ಸಹಾರನಪುರ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ರಶೀದ್‌, ರಾಜ್ಯಸಭೆಯ ಸದಸ್ಯರಾಗಿಯೂ ಕೆಲ ಅವಧಿಗೆ ಕಾರ್ಯನಿರ್ವಹಿಸಿದ್ದರು. ಜನತಾದಳ ಅಭ್ಯರ್ಥಿಯಾಗಿ 1989ರ ಲೋಕಸಭೆ ಚುನಾವಣೆ ಗೆದ್ದಿದ್ದ ಅವರು, ಅಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.