ಭಾನುವಾರ, ಜನವರಿ 24, 2021
21 °C

ಲಂಡನ್‌ನಿಂದ ಬಂದ ನಾಲ್ವರಿಗೆ ಕೋವಿಡ್‌-19 ದೃಢ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಏರ್‌ ಇಂಡಿಯಾ ವಿಮಾನದಲ್ಲಿ ಲಂಡನ್‌ನಿಂದ ದೆಹಲಿಗೆ ಬಂದಿಳಿದ ನಾಲ್ವರು ಪ್ರಯಾಣಿಕರಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್‌ ಇಂಡಿಯಾ ವಿಮಾನವು ಭಾನುವಾರ ರಾತ್ರಿ 10.30ಕ್ಕೆ ಲಂಡನ್‌ನಿಂದ ದೆಹಲಿಗೆ ಆಗಮಿಸಿದೆ.

‘ಈ ವಿಮಾನದಲ್ಲಿ ಒಟ್ಟು 186 ಪ್ರಯಾಣಿಕರಿದ್ದರು. ಮೂರು ಗಂಟೆಗಳಲ್ಲಿ ಎಲ್ಲಾ ಪ್ರಯಾಣಿಕರ ಕೋವಿಡ್ ಪರೀಕ್ಷೆ ನಡೆಸಲಾಯಿತು.  ಎಂಟು ಗಂಟೆಯೊಳಗೆ ಪ್ರಯಾಣಿಕರನ್ನು ಕಳುಹಿಸಲಾಯಿತು’ ಎಂದು ಜೆನೆಸ್ಟ್ರಿಂಗ್ಸ್‌ ಡಯಾಗ್ನೋಸ್ಟಿಕ್‌ ಸೆಂಟರ್‌ ಸಂಸ್ಥಾಪಕ ಗೌರಿ ಅಗರ್‌ವಾಲ್‌ ಹೇಳಿದ್ದಾರೆ.

ಕೊರೊನಾ ವೈರಾಣುವಿನ ಹೊಸ ಸ್ವರೂಪವು ಅಲ್ಲಿ ಪತ್ತೆಯಾದ ಕಾರಣ ಬ್ರಿಟನ್‌ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳ ಸಂಚಾರವನ್ನು ಕಳೆದ ಡಿಸೆಂಬರ್‌ 23ರಿಂದ ಜನವರಿ 7 ರವರೆಗೆ ರದ್ದುಗೊಳಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು