ತಿರುವನಂತಪುರ: ಭಾರೀ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಬೆನ್ನಲ್ಲೇ ನೆರೆಯ ಕೇರಳ ರಾಜ್ಯಕ್ಕೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಕೇರಳದಲ್ಲಿ 14 ಮಂದಿಗೆ ಝಿಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇತ್ತೀಚೆಗೆ ಗರ್ಭಿಣಿಯೊಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ಇದೀಗ, ಇನ್ನೂ 13 ಮಂದಿಗೆ ಸೋಂಕು ತಗುಲಿರುವುದನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಖಚಿತಪಡಿಸಿದೆ.

ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಗುರುವಾರ, 24 ವರ್ಷದ ಗರ್ಭಿಣೆಗೆ ಸೋಂಕು ತಗುಲಿರುವುದು ದೃಢಪಡುವ ಮೂಲಕ ಕೇರಳದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಆ ಬಳಿಕ ಇಬ್ಬರುವೈದ್ಯರು ಸೇರಿ 13 ಮಂದಿಯ ಪ್ರಯೋಗಾಲಯದ ಮಾದರಿಯನ್ನು ಪುಣೆಯ ಎನ್ಐವಿಗೆ ಕಳುಹಿಸಲಾಗಿತ್ತು. ಇದೀಗ, ಆ 13 ಮಂದಿಯಲ್ಲೂ ಸೋಂಕು ದೃಢಪಟ್ಟಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಜ್ವರ, ದದ್ದುಗಳು ಮತ್ತು ಕೀಲು ನೋವು ಮುಂತಾದ ಝಿಕಾ ವೈರಸ್ನ ರೋಗಲಕ್ಷಣಗಳು ಡೆಂಗ್ಯೂಗೆ ಹೋಲುತ್ತವೆ. ಝಿಕಾ ಹರಡುವಿಕೆಯನ್ನು ನಿಯಂತ್ರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಗರ್ಭಿಣಿಯರಲ್ಲಿ ಜ್ವರ ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿಗಳ (ಡಿಎಂಒ) ಸಭೆಯಲ್ಲಿ ಸಚಿವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.