ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಜನ್ಮಭೂಮಿ ಟ್ರಸ್ಟ್‌ ಹೆಸರಲ್ಲಿ ವೆಬ್‌ಸೈಟ್‌ ಮಾಡಿ ಹಣ ಸಂಗ್ರಹ: ಐವರ ಬಂಧನ

Last Updated 22 ಜೂನ್ 2021, 4:52 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ಅಕ್ರಮವಾಗಿ ವೆಬ್‌ಸೈಟ್ ಮಾಡಿ, ದೇವಾಲಯ ನಿರ್ಮಾಣದ ನೆಪದಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ ಐವರನ್ನು ಸೋಮವಾರ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.

ಆರೋಪಿಗಳನ್ನು ನೋಯ್ಡಾ ಸೈಬರ್ ಪೊಲೀಸ್ ಠಾಣೆ ಮತ್ತು ಲಖನೌ ಸೈಬರ್ ಅಪರಾಧ ಕೇಂದ್ರದ ಜಂಟಿ ತಂಡ ಬಂಧಿಸಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಆರೋಪಿಗಳು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ವೆಬ್‌ಸೈಟ್ ಅನ್ನು ಮಾಡಿ, ಅದರಲ್ಲಿ ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಕಿದ್ದರು. ಈ ಮೂಲಕ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದರು,’ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಆಶಿಶ್ ಗುಪ್ತಾ (21), ನವೀನ್ ಕುಮಾರ್ ಸಿಂಗ್ (26), ಸುಮಿತ್ ಕುಮಾರ್ (22), ಅಮಿತ್ ಜಾ (24) ಮತ್ತು ಸೂರಜ್ ಗುಪ್ತಾ (22) ಎಂದು ಗುರುತಿಸಲಾಗಿದೆ.

ಈ ಪೈಕಿ ಮೂವರು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯವರಾಗಿದ್ದರೆ, ಮತ್ತಿಬ್ಬರು ಬಿಹಾರದ ಸೀತಾಮರ್ಹಿ ಮೂಲದವರು. ಸದ್ಯ ಇವರೆಲ್ಲರೂ ನೋಯ್ಡಾದ ಪಕ್ಕದ ಪೂರ್ವ ದೆಹಲಿಯ ‘ನ್ಯೂ ಅಶೋಕ್ ನಗರ‘ದಲ್ಲಿ ನೆಲೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಂಚಕರ ತಂಡದಿಂದ ಪೊಲೀಸರು ಐದು ಮೊಬೈಲ್ ಫೋನ್‌ಗಳು, ಒಂದು ಲ್ಯಾಪ್‌ಟಾಪ್ ಮತ್ತು ಆಧಾರ್ ಕಾರ್ಡ್‌ಗಳ 50 ಪ‍್ರತಿಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT