ಶನಿವಾರ, ಜುಲೈ 2, 2022
25 °C

ಚಾಲನೆ ವೇಳೆ ಮುರಿದ ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಸಸ್ಪೆನ್ಷನ್‌; ಗ್ರಾಹಕ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಚಾಲನೆ ವೇಳೆ ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಮುಂಭಾಗದ ಸಸ್ಪೆನ್ಷನ್‌ ಮುರಿದು ಹೋಗಿರುವುದಾಗಿ ಗ್ರಾಹಕರೊಬ್ಬರು ದೂರಿದ್ದಾರೆ.

ಸಸ್ಪೆನ್ಷನ್‌ ಮುರಿದು ಹೋದ ಬಗ್ಗೆ ಟ್ವೀಟ್‌ ಮಾಡಿರುವ ಶ್ರೀನಂದ್‌ ಮೆನನ್‌ ಎಂಬುವವರು, ತಮ್ಮ 'ಒಲಾ ಎಸ್‌1 ಪ್ರೊ' ಗಾಡಿಯನ್ನು ಬದಲಿಸಿಕೊಡುವುಂತೆ ಕಂಪನಿಗೆ ಮನವಿ ಮಾಡಿದ್ದಾರೆ.

'ಕಡಿಮೆ ವೇಗದಲ್ಲಿ ಚಾಲನೆ ಮಾಡುವಾಗಲೂ ಸ್ಕೂಟರ್‌ನ ಮುಂಭಾಗದ ಫೋರ್ಕ್‌ (ಸಸ್ಪೆನ್ಷನ್‌ನ ಭಾಗ) ಮುರಿದು ಹೋಗುತ್ತದೆ. ಇದು ತುಂಬ ಗಂಭೀರ ಮತ್ತು ಅಪಾಯಕಾರಿ. ನಮಗೆ ಗಾಡಿಯನ್ನು ಬದಲಿಸಿಕೊಡಬೇಕು ಅಥವಾ ಸಸ್ಪೆನ್ಷನ್‌ ಭಾಗದ ವಿನ್ಯಾಸವನ್ನು ಬದಲಿಸಿಕೊಡಬೇಕು. ಕಳಪೆ ವಸ್ತುಗಳ ಬಳಕೆಯಿಂದಾಗಿ ಎದುರಾಗಬಹುದಾದ ರಸ್ತೆ ಅಪಘಾತದಿಂದ ನಮ್ಮ ಪ್ರಾಣವನ್ನು ಕಾಪಾಡಬೇಕು' ಎಂದು ಟ್ವೀಟ್‌ನಲ್ಲಿ ಶ್ರೀನಂದ್‌ ಮೆನನ್‌ ಮನವಿ ಮಾಡಿದ್ದಾರೆ.

ಸ್ಕೂಟರ್‌ನ ಸಸ್ಪೆನ್ಷನ್‌ ಮುರಿದು ಬಿದ್ದಿರುವುದರ ಫೋಟೊವನ್ನು ಶ್ರೀನಂದ್‌ ಪ್ರಕಟಿಸಿದ್ದಾರೆ.

ಹಲವು ಮಂದಿ ಮೆನನ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿರುವ ಸಮಸ್ಯೆಗಳ ಬಗ್ಗೆ ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು