ಕಾನ್ಪುರ: ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಯನ್ನು ಬಂಧಿಸಲಾಗಿದ್ದು, ಸತ್ತ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಬಾಲಕಿ ಮೃತಪಟ್ಟಿದ್ದು, ಕಂದಾಯ ಅಧಿಕಾರಿಯನ್ನು ಗುರುವಾರ ಬಂಧಿಸಲಾಗಿದೆ ಮತ್ತು ಅಮಾನತು ಮಾಡಲಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಐಪಿಸಿ ಮತ್ತು ಪೊಕ್ಸೊ ಅಡಿಯಲ್ಲಿ ಕಂದಾಯ ಅಧಿಕಾರಿ ರಂಜಿತ್ ಬರ್ವಾರ್ ಮತ್ತು ಇನ್ನಿಬ್ಬರ ವಿರುದ್ಧ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಾಲಕಿ ಗರ್ಭಿಣಿ ಎಂದು ತಿಳಿದಾಗ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಪೊಲೀಸರು ಕೂಡ ಆರೋಪಿ ಕಂದಾಯ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಬಾಲಕಿಯ ಆರೋಗ್ಯ ಹದಗೆಟ್ಟಾಗ ಪೋಷಕರು ಆಕೆಯನ್ನು ಮಂಗಳವಾರ ಮುಂಜಾನೆ ಶಿವರಾಜಪುರ ಸಿಎಚ್‌ಸಿಗೆ ದಾಖಲಿಸಿದ್ದರು.
ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಎಎಲ್ಆರ್ ಮೆಟರ್ನಿಟಿ ಮತ್ತು ಮಕ್ಕಳ ಆರೈಕೆ ವಿಭಾಗಕ್ಕೆ ದಾಖಲಿಸುವಂತೆ ಹೇಳಿದ್ದರು. ಬಳಿಕ ಬಾಲಕಿ ಅಲ್ಲಿಯೇ ಮೃತ ಮಗುವಿಗೆ ಜನ್ಮ ನೀಡಿ ಕೊನೆಯುಸಿರೆಳೆದಿದ್ದಾಳೆ.
ಗುರುವಾರ ಎಸ್‌ಡಿಎಂ ಗುಲಾಬ್ ಚಂದ್ರ ಅಗ್ರಹಾರಿ, ಆರೋಪಿ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ ಮತ್ತು ಆತನ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.