ಬುಧವಾರ, ಮೇ 19, 2021
21 °C

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ; ಕಸದ ವಾಹನದಲ್ಲೇ ಅಂತಿಮ ಯಾತ್ರೆ!

ಪಿಟಿಐ‌ Updated:

ಅಕ್ಷರ ಗಾತ್ರ : | |

ಔರಂಗಾಬಾದ್: ಆಂಬುಲೆನ್ಸ್‌ ಲಭ್ಯವಿಲ್ಲದ ಕಾರಣ ಕೋವಿಡ್-19 ರೋಗಿಯ ಮೃತದೇಹವನ್ನು ಕಸದ ವಾಹನದಲ್ಲೇ ಸ್ಮಶಾನಕ್ಕೆ ಸಾಗಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿವೆ.

ಮಹಾರಾಷ್ಟ್ರದ ಒಸ್ಮನಾಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಹೆಚ್ಚುವರಿ ಹಣ ನೀಡುವುದಾಗಿ ಹೇಳಿದರೂ ಖಾಸಗಿ ವಾಹನಗಳು ಮೃತದೇಹವನ್ನು ಸಾಗಿಸಲು ಹಿಂದೇಟು ಹಾಕಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರದಂದು ಕಿನ್ಹಿ ಗ್ರಾಮದ ನಿವಾಸಿಯೊಬ್ಬರು ಏಳು ಕಿ.ಮೀ. ದೂರದಲ್ಲಿರುವ ನೆರೆಯ ಟೆರ್ ಗ್ರಾಮದ ಖಾಸಗಿ ವೈದ್ಯರನ್ನು ಸಂಪರ್ಕಿಸಲು ಹೋಗಿ ಕ್ಲಿನಿಕ್ ಹೊರಗಡೆ ಕುಸಿದು ಬಿದ್ದು ಅಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 

ಪೊಲೀಸರು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ತಲುಪಿಸಿದರು. ಬಳಿಕ ನಡೆಸಿದ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಮೃತ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಮೃತದೇಹವನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಆದರೆ ಮೃತದೇಹವನ್ನು ಸಾಗಿಸಲು ಆಂಬುಲೆನ್ಸ್ ಲಭ್ಯವಿರಲಿಲ್ಲ.

ಟೆರ್ ಆಸ್ಪತ್ರೆಯಲ್ಲಿರುವ ಆಂಬ್ಯುಲೆನ್ಸ್ ಅನ್ನು ಗರ್ಭಿಣಿಯರಿಗಾಗಿ ಮಾತ್ರ ಮೀಸಲಿರಿಸಲಾಗಿತ್ತು. ಅದನ್ನು ಕೋವಿಡ್ ರೋಗಿಗಳಿಗೆ ಬಳಸುವಂತಿಲ್ಲ. ಆದರೂ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ಆಟೋರಿಕ್ಷಾ ಸೇರಿದಂತೆ ಇತರೆ ಖಾಸಗಿ ವಾಹನಗಳನ್ನು ಸಂಪರ್ಕಿಸಲಾಯಿತು. ಆದರೆ ಎಲ್ಲರೂ ನಿರಾಕರಿಸಿದರು ಎಂದು ಕಿನ್ಹಿ ಗ್ರಾಮದ ಸರಪಂಚ್ ವಿಜಯ್ ಹಜ್ಗಡೆ ಹೇಳಿದ್ದಾರೆ.

ಅಂತಿಮವಾಗಿ ತ್ಯಾಜ್ಯ ವಿಲೇವಾರಿ ಟ್ರಕ್‌ನಲ್ಲಿ ಮೃತದೇಹದ ಅಂತಿಮ ಯಾತ್ರೆಯನ್ನು ನಡೆಸಲಾಯಿತು ಎಂದವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು