ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ | ಸಾಮೂಹಿಕ ಅತ್ಯಾಚಾರವೆಸಗಿ ₹ 50 ಸಾವಿರಕ್ಕೆ ಬಾಲಕಿಯ ಮಾರಾಟ; ಮೂವರ ಬಂಧನ

Last Updated 30 ಸೆಪ್ಟೆಂಬರ್ 2022, 13:29 IST
ಅಕ್ಷರ ಗಾತ್ರ

ಪಟ್ನಾ: ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ನಂತರ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರನ್ನು ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಬಾಲಕಿಯನ್ನು ವೇಶ್ಯಾವಾಟಿಕೆ ನಡೆಸುವ ಮಹಿಳೆಯೊಬ್ಬರಿಗೆ ₹ 50 ಸಾವಿರಕ್ಕೆ ಮಾರಾಟ ಮಾಡಲಾಗಿದೆ. ಅದಕ್ಕೂ ಮುನ್ನ ಪೊಲೀಸ್‌ ಸಿಬ್ಬಂದಿ ಸೇರಿದಂತೆ ಹಲವರು ಸಂತ್ರಸ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದುಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮೌ ಜಿಲ್ಲೆಯ ಪೊಲೀಸರುವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಸೋನಿ ದೇವಿ ಎಂಬಾಕೆ ತನ್ನ ಮನೆಯಲ್ಲೇವೇಶ್ಯಾವಾಟಿಕೆ ನಡೆಸುತ್ತಿದ್ದಳು ಎನ್ನಲಾಗಿದ್ದು, ಆಕೆಯ ವಶದಲ್ಲಿದ್ದ ಬಾಲಕಿಯನ್ನು ರಕ್ಷಿಸಲಾಗಿದೆ.

ಮಧುಬನಿ ಜಿಲ್ಲೆಯ ಜೈನಗರ್ ಪ್ರದೇಶದಲ್ಲಿರುವ ಅಶೋಕ ಮಾರುಕಟ್ಟೆಯಲ್ಲಿ ರಾತ್ರಿ ಗಸ್ತಿಗೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಅರ್ಜುನ್‌ ಯಾದವ್‌, ಎಲೆಕ್ಟ್ರಿಷಿಯನ್‌ ಸಂಜನ್‌ ಕುಮಾರ್‌ ಹಾಗೂ ಸೋನಿ ದೇವಿಯನ್ನು ಬಂಧಿಸಲಾಗಿದೆ.

ಜೈನಗರ್‌ಠಾಣೆಯ ಪೊಲೀಸ್ ವಾಹನ ಚಾಲಕ ಆಚಾರ್ಯ ಹಾಗೂ ಭದ್ರತಾ ಸಿಬ್ಬಂದಿ ರಾಮ್‌ಜೀವನ್‌ ಪಾಸ್ವಾನ್‌ ತಲೆಮರೆಸಿಕೊಂಡಿದ್ದಾರೆ.

ತನ್ನ ತವರೂರಾದ ಮೌ ಪಟ್ಟಣದಿಂದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದಸಂತ್ರಸ್ತ ಬಾಲಕಿ ಮಧುಬನಿ ಜಿಲ್ಲೆಯ ಜೈನಗರ್‌ ಪಟ್ಟಣ ತಲುಪಿದ್ದಳು. ಅಶೋಕ್‌ ಮಾರುಕಟ್ಟೆಯಲ್ಲಿದ್ದ ಆಕೆಯನ್ನು ಆರೋಪಿ ಅರ್ಜುನ್‌ ಯಾದವ್‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ನಂತರ ತನ್ನ ಇತರ ಮೂವರು ಸ್ನೇಹಿತರನ್ನೂ ಕರೆದಿದ್ದ. ಎಲ್ಲರೂ ಸೇರಿ ಅತ್ಯಾಚಾರವೆಸಗಿ ಬಾಲಕಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿದ್ದರು.

ನಿರಂತರವಾಗಿ ದೌರ್ಜನ್ಯವೆಸಗಿದ್ದ ದುಷ್ಕರ್ಮಿಗಳು, ಬೇರೆಯವರನ್ನೂ ಕರೆದು ಕಿರುಕುಳ ನೀಡಿದ್ದರು.

ಬಾಲಕಿ ನಾಪತ್ತೆಯಾದ ಬಗ್ಗೆ ಆಕೆಯ ಪೋಷಕರು ಮೌ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಮಾಹಿತಿ ಆಧರಿಸಿ ಜೈನಗರ್‌ ತಲುಪಿದ್ದ ಮೌ ಪೊಲೀಸರು, ಬಾಲಕಿಯನ್ನು ಕೂಡಿಹಾಕಿದ್ದ ಸೋನಿ ದೇವಿ ಮನೆ ಮೇಲೆ ದಾಳಿ ನಡೆಸಿದ್ದರು. ಕೂಡಲೇ ಸಂತ್ರಸ್ತೆಯನ್ನು ರಕ್ಷಿಸಿ, ಮಹಿಳೆಯನ್ನು ಬಂಧಿಸಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಜೈನಗರ್‌ ಠಾಣಾ ಉಸ್ತುವಾರಿ ಅಧಿಕಾರಿ ಸಂಜಯ್‌ ಕುಮಾರ್‌, ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.

'ವೇಶ್ಯವಾಟಿಕೆ ನಡೆಸುತ್ತಿದ್ದ ಮಹಿಳೆಯ ಮನೆ ಮೇಲೆ ಮೌ ಪೊಲೀಸರು ದಾಳಿ ನಡೆಸಿದ್ದಾರೆ. ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ. ತನಿಖೆ ವೇಳೆ ಮತ್ತಷ್ಟು ಹೆಸರುಗಳು ಕೇಳಿ ಬಂದಿವೆ. ಅವರನ್ನೂ ಜೈಲಿಗಟ್ಟಲಾಗುವುದು ಎಂದು' ಜೈನಗರ್‌ ವಿಭಾಗೀಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT