ಗುರುವಾರ , ಮಾರ್ಚ್ 23, 2023
31 °C

ಕೋವಿಡ್‌ 3ನೇ ಅಲೆ; ಜನರಿಗೆ ನೆರವಾಗಲು 2,571 ಕಾರ್ಯಕರ್ತರಿಗೆ ತರಬೇತಿ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಪಣಜಿ: ಸಂಭಾವ್ಯ ಕೋವಿಡ್‌-19 ಮೂರನೇ ಅಲೆ ಸಂದರ್ಭದಲ್ಲಿ ಜನರಿಗೆ ನೆರವು ನೀಡುವುದಕ್ಕಾಗಿ 38 ವಿಧಾನಸಭೆ ಕ್ಷೇತ್ರಗಳ 2,571 ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಗೋವಾ ಬಿಜೆಪಿ ತಿಳಿಸಿದೆ.

ʼ40 ವಿಧಾನಸಭೆ ಕ್ಷೇತ್ರಗಳ‌ ಪೈಕಿ 38 ಕ್ಷೇತ್ರಗಳ‌ 3,243 ಬೂತ್‌ ಮಟ್ಟದ ಕಾರ್ಯಕರ್ತರಲ್ಲಿ 2,571 ಮಂದಿಗೆ (ಶೇ 86) ರಾಷ್ಟ್ರೀಯ ಆರೋಗ್ಯ ಸ್ವಯಂಸೇವಕರ ಅಭಿಯಾನದ ಭಾಗವಾಗಿ ಗೋವಾ ಬಿಜೆಪಿ ವೈದ್ಯಕೀಯ ಘಟಕವು ತರಬೇತಿ ನೀಡಿದೆ. ಕೋವಿಡ್‌ ಮೂರನೇ ಅಲೆ ನಿಯಂತ್ರಣದ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ 150 ತರಬೇತುದಾರರಿಗೂ ತರಬೇತಿ ನೀಡಲಾಗಿದೆʼ ಎಂದು ಬಿಜೆಪಿ ವೈದ್ಯಕೀಯ ವಿಭಾಗದ ಉಸ್ತುವಾರಿ ಡಾ. ಶೇಖರ್‌ ಸಾಲ್ಕರ್‌ ತಿಳಿಸಿದ್ದಾರೆ.

ಗಣೇಶ ಚತುರ್ಥಿಯ ಬಳಿಕ ಉಳಿದ ಎರಡು ಕ್ಷೇತ್ರಗಳಲ್ಲೂ ಅಭಿಯಾನ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ʼಕೊರಾನಾವೈರಸ್‌ ಏನು, ಕೋವಿಡ್‌ನ ಸ್ವಭಾವ ಎಂಥದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ, ಸರಿಯಾದ ಆಹಾರ ಕ್ರಮ-ಯೋಗ, ಮೂರನೇ ಅಲೆ ನಿಯಂತ್ರಣ ಸೇರಿದಂತೆ ತರಬೇತಿಯು ಎಲ್ಲ ಆಯಾಮಗಳನ್ನೂ ಒಳಗೊಂಡಿದೆ. ಮಾಸ್ಕ್‌ ಧರಿಸುವುದು, ಬಳಸಿದ ಮಾಸ್ಕ್‌ ವಿಲೇವಾರಿ ಮಾಡುವುದು ಹೇಗೆ, ಪಲ್ಸ್‌ ಆಕ್ಸಿಮೀಟರ್ ಮತ್ತು ಥರ್ಮಲ್‌ ಗನ್‌ ಬಳಸುವುದು ಹೇಗೆ ಎಂಬುದನ್ನೂ ತಿಳಿಸಿಕೊಡಲಾಗಿದೆʼ ಎಂದು ಸಾಲ್ಕರ್‌ ಹೇಳಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಪಣಜಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಸ್ವಯಂಸೇವಕರ ಅಭಿಯಾನಕ್ಕೆ ಆಗಸ್ಟ್‌ 8ರಂದು ಚಾಲನೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು