ಗುರುವಾರ , ಸೆಪ್ಟೆಂಬರ್ 16, 2021
26 °C

ಗೋವಾದಲ್ಲಿ ಕೋವಿಡ್ 19 ಕರ್ಫ್ಯೂ ಮತ್ತಷ್ಟು ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

DH File

ಪಣಜಿ: ಕೋವಿಡ್ 19 ಸಾಂಕ್ರಾಮಿಕ ಹರಡುವಿಕೆ ತಡೆಗಟ್ಟುವ ಸಲುವಾಗಿ ಗೋವಾದಲ್ಲಿ ಹೇರಲಾಗಿದ್ದ ಕರ್ಫ್ಯೂ ವಿಸ್ತರಿಸಲಾಗಿದೆ.

ಗೋವಾ ಸರ್ಕಾರ ಈ ಬಗ್ಗೆ ಶನಿವಾರ ಸೂಚನೆ ಹೊರಡಿಸಿದ್ದು, ಈಗಾಗಲೇ ಜಾರಿಯಲ್ಲಿರುವ ಕರ್ಫ್ಯೂವನ್ನು ಜುಲೈ 5ರವರೆಗೆ ವಿಸ್ತರಿಸಲಾಗುವುದು ಎಂದಿದೆ.

ಮೇ 9ರಂದು ಗೋವಾದಲ್ಲಿ ಮೊದಲು ಕರ್ಫ್ಯೂ ಹೇರಲಾಗಿತ್ತು. ಕೋವಿಡ್ ಪ್ರಕರಣ ಹೆಚ್ಚಳ ತಡೆಯುವಿಕೆಯಲ್ಲಿ ನಿರ್ಬಂಧ ಹೇರಿಕೆ ನೆರವಾಗಿದ್ದು, ಬಳಿಕ ಅದನ್ನು ಜೂನ್ 28ರವರೆಗೆ ರಾಜ್ಯ ಸರ್ಕಾರ ವಿಸ್ತರಣೆ ಮಾಡಿತ್ತು..

ಬಳಿಕ ತಜ್ಞರ ಸಮಿತಿ ಜತೆ ಸಮಾಲೋಚನೆ ನಡೆಸಿದ್ದು, ಸರ್ಕಾರ ಮತ್ತೆ ಕರ್ಫ್ಯೂ ಅವಧಿ ವಿಸ್ತರಿಸಿದೆ.

ಗೋವಾದಲ್ಲಿ ಜುಲೈ 5ರ ಬೆಳಗ್ಗೆ 7ರವರೆಗೆ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟ್ವಿಟರ್ ಮೂಲಕ ಪ್ರಕಟಿಸಿದ್ದಾರೆ.

ಗೋವಾದಲ್ಲಿ ಶನಿವಾರ 235 ಹೊಸ ಕೋವಿಡ್ 19 ಪ್ರಕರಣ ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ. ಜತೆಗೆ 2,604 ಸಕ್ರಿಯ ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು