ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ‘ಸಿಲ್ಲಿ ಸೋಲ್ಸ್’ ಕೆಫೆ ಪರವಾನಗಿ ರದ್ದುಪಡಿಸಲು ನಿರಾಕರಣೆ

Last Updated 20 ಅಕ್ಟೋಬರ್ 2022, 14:42 IST
ಅಕ್ಷರ ಗಾತ್ರ

ಪಣಜಿ: ಗೋವಾದ ಅಸ್ಸಾಗಾವೊ ಗ್ರಾಮದಲ್ಲಿನ ವಿವಾದಿತ ಕೆಫೆ ‘ಸಿಲ್ಲಿ ಸೋಲ್ಸ್‌’ಗೆ ನೀಡಲಾದ ಮದ್ಯದ ಪರವಾನಗಿಯನ್ನು ರದ್ದುಪಡಿಸಲು ಗೋವಾ ರಾಜ್ಯ ಅಬಕಾರಿ ಆಯುಕ್ತ ನಾರಾಯಣ ಗಡ್‌ ಗುರುವಾರ ನಿರಾಕರಿಸಿದ್ದಾರೆ.

ಕೆಫೆಯ ಮದ್ಯದ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಕೋರಿ ವಕೀಲ, ಸಾಮಾಜಿಕ ಕಾರ್ಯಕರ್ತ ಐರಿಸ್ ರೋಡ್ರಿಗಸ್ ಎಂಬುವವರು ಆಯುಕ್ತರಿಗೆ ದೂರು ಸಲ್ಲಿಸಿದ್ದರು.ಈ ಕೆಫೆಯೊಂದಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುಟುಂಬಕ್ಕೆ ನಂಟು ಇದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ನಾರಾಯಣ್ ಗಡ್ ಅವರು ಹಲವಾರು ತಿಂಗಳುಗಳ ಕಾಲ ನಡೆಸಿದ ಸರಣಿ ವಿಚಾರಣೆಯ ನಂತರ ಪರವಾನಗಿಯನ್ನು ರದ್ದುಗೊಳಿಸಲು ಅಥವಾ ಅಮಾನತುಗೊಳಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT