ಭುವನೇಶ್ವರ: ಅಂಗುಲ್–ತಾಲ್‌ಚೇರ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈಸ್ಟ್‌ಕೋಸ್ಟ್ ರೈಲ್ವೆ ವಿಭಾಗದ ಗೂಡ್ಸ್‌ರೈಲಿನ ಆರು ಬೋಗಿಗಳು ಮಂಗಳವಾರ ಮುಂಜಾನೆ ಹಳಿ ತಪ್ಪಿ ನದಿಗೆ ಉರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಧಿಯನ್ನು ಸಾಗಿಸುತ್ತಿದ್ದ ರೈಲಿನ ಆರು ಬೋಗಿಗಳು ಮುಂಜಾನೆ 2.30ರ ಸುಮಾರಿಗೆ ಹಳಿ ತಪ್ಪಿ ನದಿಗೆ ಉರುಳಿವೆ. ಆದರೆ, ರೈಲಿನ ಎಂಜಿನ್ ಹಳಿಯ ಮೇಲೆ ಇದ್ದಿದ್ದರಿಂದ, ಲೋಕೊ ಪೈಲಟ್ ಮತ್ತು ಇತರ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ‘ ಎಂದು ಅವರು ಹೇಳಿದರು.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ. ಫಿರೋಜ್‌ಪುರ ದಿಂದ ಖುರ್ದಾ ರಸ್ತೆಯತ್ತ ಹೋಗುತ್ತಿದ್ದ ಈ ಗೂಡ್ಸ್ ರೈಲಿನ ಬೋಗಿಗಳು ನಂದಿರಾ ಸೇತುವೆಯ ಮೇಲೆ ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ನಂತರ, ಈಸ್ಟ್‌ಕೋಸ್ಟ್ ರೈಲ್ವೆ ವಿಭಾಗ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳನ್ನು ರದ್ದುಗೊಳಿಸಿತು. ಎಂಟು ರೈಲುಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಿತು.
ಸೋಮವಾರ ತಾಲ್‌ಚೇರ್ ಪ್ರದೇಶದಲ್ಲಿ 160 ಮಿ.ಮೀ. ಮತ್ತು ಅಂಗುಲ್ ವ್ಯಾಪ್ತಿಯಲ್ಲಿ 74 ಮಿ.ಮೀ. ಮಳೆಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.