ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಗೆ ನೀಡಿದ್ದ ಬಂಗ್ಲೆ ಖಾಲಿ ಮಾಡಲು ಚಿರಾಗ್ ಪಾಸ್ವಾನ್‌ಗೆ ಸೂಚನೆ

Last Updated 10 ಆಗಸ್ಟ್ 2021, 15:12 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಮಾಜಿ ಸಚಿವ ದಿವಂಗತ ರಾಮ್‌ ವಿಲಾಸ್ ಪಾಸ್ವಾನ್ ಅವರಿಗೆ ನೀಡಿದ್ದ ಬಂಗಲೆಯನ್ನು ಖಾಲಿ ಮಾಡುವಂತೆ ಅವರ ಪುತ್ರ ಸಂಸದ ಚಿರಾಗ್ ಪಾಸ್ವಾನ್ ಅವರಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸೂಚಿಸಿದೆ.

ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ನಿಧನರಾಗುವವರೆಗೂ ಸುಮಾರು ಮೂರು ದಶಕಗಳ ಕಾಲ ‘12 ಜನಪಥ್’ ಬಂಗಲೆಯಲ್ಲಿಯೇ ವಾಸವಾಗಿದ್ದರು. 1989ರಿಂದ 2020ರ ತನಕ ಅವರು ಇದೇ ಬಂಗಲೆಯಲ್ಲಿ ನೆಲೆಸಿದ್ದರು.

ರಾಮ್ ವಿಲಾಸ್ ಅವರ ನಿಧನದ ನಂತರ ಅವರ ಪತ್ನಿ, ಪುತ್ರ ಚಿರಾಗ್ ಮತ್ತು ಅವರ ಕುಟುಂಬದ ಸದಸ್ಯರು ಇಲ್ಲಿ ತಂಗಿದ್ದಾರೆ.

‘ಬಂಗಲೆಯನ್ನು ಕೇಂದ್ರ ಮಂತ್ರಿಗಳಿಗೆ ಮೀಸಲಿಡಲಾಗಿದೆ ಮತ್ತು ಸರ್ಕಾರಿ ವಸತಿಗೃಹದ ನಿವಾಸಿಗಳು ಅದನ್ನು ಖಾಲಿ ಮಾಡುವಂತೆ ಕೋರಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಗಲೆ ತೆರವು ಸೂಚನೆಗೆ ಸಂಬಂಧಿಸಿದಂತೆ ಚಿರಾಗ್ ಪಾಸ್ವಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT