ಶುಕ್ರವಾರ, ಮೇ 20, 2022
23 °C

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮಾರುಕಟ್ಟೆಗೆ: ಸಮಿತಿ ಶಿಫಾರಸು

ಪಿಟಿಐ Updated:

ಅಕ್ಷರ ಗಾತ್ರ : | |

A vial of Covishield. Credit: Reuters Photo

ನವದೆಹಲಿ: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳನ್ನು ಸಾಮಾನ್ಯ ಮಾರುಕಟ್ಟೆಯಲ್ಲಿ ಒದಗಿಸಲು ಕೇಂದ್ರದ ಔಷಧ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಫಾರ್ಮಾ ಕಂಪನಿಗಳಾದ ಸೀರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್, ಈ ಕುರಿತು ಭಾರತೀಯ ಔಷಧ ನಿಯಂತ್ರಣ ಸಮಿತಿಗೆ ಅರ್ಜಿ ಸಲ್ಲಿಸಿದ್ದವು.

ಎರಡೂ ಲಸಿಕೆಗಳು ಈಗ ತುರ್ತು ಬಳಕೆಯ ಪಟ್ಟಿಯಲ್ಲಿವೆ. ಅದರ ಬದಲು ಸಾಮಾನ್ಯ ಮಾರುಕಟ್ಟೆಯಲ್ಲೂ ಅವು ದೊರೆಯುವಂತಾಗಬೇಕು ಎಂದು ಕಂಪನಿಗಳು ಕೋರಿಕೊಂಡಿದ್ದವು.

ಎರಡೂ ಕಂಪನಿಗಳು ಅನುಮತಿ ಕೋರಿದ್ದ ಬಳಿಕ, ಡಿಸಿಜಿಐ ಮತ್ತಷ್ಟು ಹೆಚ್ಚಿನ ದಾಖಲೆ ಮತ್ತು ದತ್ತಾಂಶ ಕಳುಹಿಸಿಕೊಡುವಂತೆ ಹೇಳಿತ್ತು. ಅದಾದ ನಂತರ ಸೀರಂ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ದಾಖಲೆ ಸಲ್ಲಿಸಿದ್ದವು. ಅವುಗಳನ್ನು ಪರಿಶೀಲಿಸಿ, ಸಮಿತಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ.

ಕೋವಿಡ್ ವಿರುದ್ಧ ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳನ್ನು ಆದ್ಯತೆಯ ಮೇರೆಗೆ ನೀಡಲಾಗುತ್ತಿದೆ. ಅದರ ಜತೆಗೆ ವಿದೇಶಿ ಕಂಪನಿಗಳ ಲಸಿಕೆ ಕೂಡ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು