ಶನಿವಾರ, ಆಗಸ್ಟ್ 13, 2022
26 °C

ಕೊವೊವ್ಯಾಕ್ಸ್‌ ತುರ್ತು ಬಳಕೆ ಅನುಮತಿಗೆ ತಜ್ಞರ ಸಮಿತಿ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 7ರಿಂದ 11 ವರ್ಷದೊಳಗಿನ ಮಕ್ಕಳಿಗೆ ಪುಣೆ ಮೂಲದ ಸೀರಂ ಇನ್ಸ್‌ಟಿಟ್ಯೂಟ್‌ (ಎಸ್‌ಐಐ) ತಯಾರಿಸಿರುವ ಕೊವೊವ್ಯಾಕ್ಸ್‌ ಲಸಿಕೆಯ ತುರ್ತು ಬಳಕೆಯ ಅನುಮತಿಗೆ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿ ಶುಕ್ರವಾರ ಶಿಫಾರಸು ಮಾಡಿದೆ.

ಶಿಫಾರಸನ್ನು ಅಂತಿಮ ಅನುಮೋದನೆಗಾಗಿ ಭಾರತೀಯ ಔಷಧ ನಿಯಂತ್ರಕ ಮಹಾನಿರ್ದೇಶಕರಿಗೆ (ಡಿಸಿಜಿಐ) ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತುರ್ತು ಬಳಕೆಗೆ ಅನುಮತಿ ನೀಡುವಂತೆ ಮಾರ್ಚ್ 16ರಂದು ಎಸ್‌ಐಐ ನಿರ್ದೇಶಕ (ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳು) ಪ್ರಕಾಶ್ ಕುಮಾರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್‌ನಲ್ಲಿ ನಡೆದ ತನ್ನ ಕೊನೆಯ ಸಭೆಯಲ್ಲಿ ತಜ್ಞರ ಸಮಿತಿಯು ಅರ್ಜಿಯ ಕುರಿತು ಹೆಚ್ಚಿನ ಮಾಹಿತಿ ಒದಗಿಸುವಂತೆ ಎಸ್‌ಐಐ ಸಂಸ್ಥೆಗೆ ಕೇಳಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು