ಮಂಗಳವಾರ, ಸೆಪ್ಟೆಂಬರ್ 21, 2021
21 °C

ಕೋವಿಡ್‌ನಿಂದ ಅನಾಥರಾದ ಮಕ್ಕಳ ಮಾಸಿಕ ಸ್ಟೈಪೆಂಡ್‌ ಏರಿಕೆ: ಕೇಂದ್ರ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್–19ನಿಂದ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ನೀಡಲಾಗುವ ಮಾಸಿಕ ಸ್ಟೈಪೆಂಡ್‌ ಮೊತ್ತವನ್ನು ಹಾಲಿ ₹ 2000 ದಿಂದ ₹ 4,000ಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ಪ್ರಸ್ತಾವ ಮುಂದಿನ ವಾರ ಸಂಪುಟ ಸಭೆಯ ಅನುಮೋದನೆಗೆ ಬರುವ ಸಂಭವವಿದೆ ಎಂದು ತಿಳಿಸಿದರು.

ತಂದೆ–ತಾಯಿ ಅಥವಾ ಕಾನೂನುಬದ್ಧ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ, ‘ಮಕ್ಕಳಿಗಾಗಿ ಪಿ.ಎಂ–ಕೇರ್ಸ್‌’ ಯೋಜನೆಯಡಿ ನೆರವು ನೀಡುವುದನ್ನು ಸರ್ಕಾರ ಪ್ರಕಟಿಸುವ ಸಂಭವವಿದೆ.

ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಇದುವರೆಗೂ ಯೋಜನೆಯಡಿ ನೆರವು ಕೋರಿ 3,250 ಅರ್ಜಿಗಳು ಬಂದಿವೆ. ಆಯಾ ಜಿಲ್ಲಾಧಿಕಾರಿಗಳು 667 ಅರ್ಜಿಗಳಿಗೆ ಅನುಮೋದನೆ ನೀಡಿದ್ದಾರೆ. ಒಟ್ಟು 467 ಜಿಲ್ಲೆಗಳಿಂದ ಮಾಹಿತಿ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು