ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾಂಶ ರಕ್ಷಣೆ ಮಸೂದೆ ಉಲ್ಲಂಘಿಸಿದರೆ ₹500 ಕೋಟಿವರೆಗೆ ದಂಡ: ಕೇಂದ್ರ ಸರ್ಕಾರ

Last Updated 18 ನವೆಂಬರ್ 2022, 12:52 IST
ಅಕ್ಷರ ಗಾತ್ರ

ನವದೆಹಲಿ:ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ 2022ರ ಅಡಿಯಲ್ಲಿನ ನಿಬಂಧನೆಗಳನ್ನು ಉಲ್ಲಂಘಿಸಿದರೆ ವಿಧಿಸುವದಂಡದ ಮೊತ್ತವನ್ನು₹500 ಕೋಟಿಯವರೆಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಶುಕ್ರವಾರ ಉದ್ದೇಶಿತ ಕರಡು ಪ್ರಸ್ತಾವನೆ ಹೊರಡಿಸಿದೆ.

2019ರಲ್ಲಿ ಹೊರಡಿಸಲಾದ ಕರಡು ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆಯಲ್ಲಿ ದಂಡದ ಮೊತ್ತವನ್ನು ₹15 ಕೋಟಿ ಅಥವಾ ಸಂಬಂಧಿಸಿದ ಕಂಪನಿಯ ಜಾಗತಿಕ ವಹಿವಾಟಿನ ಶೇ 4ರಷ್ಟನ್ನು ಪಾವತಿಸುವಂತೆ ನಿಗದಿಪಡಿಸಲಾಗಿತ್ತು. ಆದರೆ, ಈ ಮಸೂದೆಯನ್ನು ಸರ್ಕಾರ ಇದೇ ವರ್ಷದಆಗಸ್ಟ್‌ನಲ್ಲಿ ಹಿಂತೆಗೆದುಕೊಂಡಿತ್ತು.ಪ್ರಸ್ತಾವಿತ 2022ರ ಮಸೂದೆಯು, ದತ್ತಾಂಶ ರಕ್ಷಣೆ ಮಸೂದೆ ಬದಲಿಗೆ ಜಾರಿಗೆ ಬರಲಿದೆ.ಭಾರತದ ದತ್ತಾಂಶ ರಕ್ಷಣಾ ಮಂಡಳಿ ಸ್ಥಾಪಿಸುವ ಪ್ರಸ್ತಾವನೆಯನ್ನೂ ಈ ಉದ್ದೇಶಿತ ಕರಡು ಒಳಗೊಂಡಿದೆ. ಇದು ಮಸೂದೆಯ ನಿಬಂಧನೆಗಳ ಅನುಸಾರವೇ ಕಾರ್ಯನಿರ್ವಹಿಸಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ ಸಚಿವಾಲಯವು ಈ ಕರಡು ಮಸೂದೆಯ ಪ್ರಸ್ತಾವನೆಯನ್ನು ಹೊರಡಿಸಿದೆ. ಇದಕ್ಕೆ ಅಭಿಪ್ರಾಯ ಮತ್ತು ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಡಿಸೆಂಬರ್ 17ರವರೆಗೆ ಅವಕಾಶ ಕಲ್ಪಿಸಿದೆ.

‘ಈ ಮಸೂದೆಯ ಉದ್ದೇಶವು ಡಿಜಿಟಲ್ ವೈಯಕ್ತಿಕ ದತ್ತಾಂಶವನ್ನು ತಮ್ಮ ವೈಯಕ್ತಿಕ ದತ್ತಾಂಶವಾಗಿ ರಕ್ಷಿಸುವವರ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿತ್ತು. ಕಾನೂನುಬದ್ಧ ಉದ್ದೇಶಗಳಿಗಾಗಿ ಮತ್ತು ಇತರ ಸಂದರ್ಭೋಚಿತ ಉದ್ದೇಶಗಳಿಗಾಗಿ ವೈಯಕ್ತಿಕ ದತ್ತಾಂಶ ರಕ್ಷಿಸುವ ಪ್ರಕ್ರಿಯೆಯ ಅವಶ್ಯಕತೆ ಇದೆ’ ಎಂದು ಕರಡು ಮಸೂದೆಯ ವಿವರಣಾತ್ಮಕ ಟಿಪ್ಪಣಿಯಲ್ಲಿ ಹೇಳಿದೆ.

ವೈಯಕ್ತಿಕ ಡಿಜಿಟಲ್‌ ದತ್ತಾಂಶ ರಕ್ಷಣೆ ಮಸೂದೆ ನಾಗರಿಕರ (ಡಿಜಿಟಲ್ ನಾಗರಿಕ್‌)ಹಕ್ಕುಗಳು ಮತ್ತು ಕರ್ತವ್ಯಗಳನ್ನು ರೂಪಿಸುವ ಶಾಸನವಾಗಿದೆ. ಒಂದೆಡೆ ಸಂಗ್ರಹಿಸಿದ ದತ್ತಾಂಶವನ್ನು ಕಾನೂನುಬದ್ಧವಾಗಿ ಬಳಸಲು ಕಟ್ಟುಪಾಡುಗಳನ್ನು ವಿಧಿಸಿದರೆ, ಇನ್ನೊಂದೆಡೆ ದತ್ತಾಂಶದವಿಶ್ವಾಸಾರ್ಹತೆ ಕಾಯುತ್ತದೆ’ ವಿವರಣಾತ್ಮಕ ಟಿಪ್ಪಣಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT