ಬುಧವಾರ, ಅಕ್ಟೋಬರ್ 28, 2020
18 °C

‘ಹನಿ’ಟ್ರ್ಯಾಪ್: ವಿಜ್ಞಾನಿ ಅಪಹರಣ–ರಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನೋಯ್ಡಾ: ‘ಹನಿಟ್ರ್ಯಾಪ್‌’ನಲ್ಲಿ ಸಿಲುಕಿ ಅಪಹರಣಕ್ಕೊಳಗಾಗಿದ್ದ ಸರ್ಕಾರದ ಉನ್ನತ ಸಂಸ್ಥೆಯೊಂದರ ವಿಜ್ಞಾನಿಯೊಬ್ಬರನ್ನು ನೋಯ್ಡಾದ ಹೋಟೆಲ್ ರೂಂನಲ್ಲಿ ರಕ್ಷಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿರುವ ಸರ್ಕಾರದ ಉನ್ನತ ಸಂಸ್ಥೆಯೊಂದರಲ್ಲಿ ಕಿರಿಯ ವಿಜ್ಞಾನಿಯಾಗಿದ್ದ ವ್ಯಕ್ತಿಯನ್ನು ಸೆಕ್ಟರ್ 41ರಲ್ಲಿ ಶನಿವಾರ ಒಯೊ ಹೋಟೆಲ್‌ನಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ರಣವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಅಪಹರಣಕಾರರು ವಿಜ್ಞಾನಿ ಬಿಡುಗಡೆಗಾಗಿ ಆತನ ಪತ್ನಿಗೆ ₹ 10ಲಕ್ಷದ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ವಿಜ್ಞಾನಿ ಪತ್ನಿ ಪೊಲೀಸರ ಗಮನಕ್ಕೆ ತಂದಿದ್ದರು. ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಪೊಲೀಸರು, ವಿಜ್ಞಾನಿಯನ್ನು ಅಪಹರಣಕಾರರಿಂದ ರಕ್ಷಿಸಿದ್ದಾರೆ.

ವಿವರ: ಹೆಂಡತಿಗೆ ಗೊತ್ತಿಲ್ಲದಂತೆ ವಿಜ್ಞಾನಿ ಗೂಗಲ್‌ನಲ್ಲಿ ದೊರೆತ ಮಸಾಜ್ ಪಾರ್ಲರ್ಲ್‌ ನಂಬರ್‌ಗೆ ಕರೆ ಮಾಡಿದ್ದರು. ಆರೋಪಿಗಳು ಹೋಟೆಲ್‌ನಲ್ಲಿ ಮಸಾಜ್ ಮಾಡುವುದಾಗಿ ವಿಜ್ಞಾನಿಯನ್ನು ಕರೆಸಿ‌ ಬಂಧನದಲ್ಲಿರಿಸಿ, ಅವರ ಪತ್ನಿಗೆ ಕರೆ ಮಾಡಿ ₹10ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣವನ್ನು ಹೊಂದಿಸಲಾಗದೇ ಪತ್ನಿ, ಪೊಲೀಸರಿಗೆ ಕರೆ ಮಾಡಿದ್ದರು. ನಂತರ ವಿಜ್ಞಾನಿಯನ್ನು ಹೋಟೆಲ್‌ನಿಂದ ರಕ್ಷಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು