ಮಂಗಳವಾರ, ಮಾರ್ಚ್ 28, 2023
26 °C

ಚಲಿಸುತ್ತಿದ್ದ ಟ್ರಕ್‌ನಿಂದ ₹1 ಕೋಟಿ ಮೌಲ್ಯದ ಗ್ಯಾಜೆಟ್‌ ಕಳ್ಳತನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರೇಂದ್ರನಗರ (ಸೌರಾಷ್ಟ್ರ): ಹೆದ್ದಾರಿಯಲ್ಲಿ ಸಂಚರಿಸುವ ಟ್ರಕ್‌ಗಳಿಂದ ಸರಕು ಕದಿಯುವಲ್ಲಿ ನುರಿತ ತಂಡವೊಂದು ಇಲ್ಲಿನ ಲಿಂಬಿಡಿ-ರಾಜ್‌ಕೋಟ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್‌ನಿಂದ ₹1 ಕೋಟಿ ಮೌಲ್ಯದ ಗ್ಯಾಜೆಟ್‌ ಕಳ್ಳತನ ಮಾಡಿದೆ.

ಶನಿವಾರ ರಾತ್ರಿ ಪ್ರಕರಣ ವರದಿಯಾಗಿದ್ದು,  ಸುರೇಂದ್ರನಗರ ಪೊಲೀಸರು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ.  ಚಲಿಸುತ್ತಿದ್ದ ಟ್ರಕ್‌ ಏರಿ, ಬೀಗ ಮುರಿದು, ವಾಹನದಿಂದ ಸರಕುಗಳನ್ನು ಕದಿಯುವ ಇಬ್ಬರನ್ನು ತಮ್ಮ ತಂಡ ಹುಡುಕುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಿ ಪಿ ಮುಂಧ್ವಾ ತಿಳಿಸಿದ್ದಾರೆ.

ಲಿಂಬ್ಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ರಿಲೇ ಎಕ್ಸ್‌ಪ್ರೆಸ್ ಲಾಜಿಸ್ಟಿಕ್‌ಗೆ ಸೇರಿದ ಟ್ರಕ್ ಅಹಮದಾಬಾದ್‌ನಿಂದ ಸರಕುಗಳನ್ನು ತುಂಬಿಕೊಂಡು ರಾಜ್‌ಕೋಟ್ ಕಡೆಗೆ ಹೋಗುತ್ತಿದ್ದಾಗ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, 259 ಮೊಬೈಲ್ ಫೋನ್‌, ಹೆಡ್‌ಫೋನ್‌, ಕೈಗಡಿಯಾರಗಳು ಮತ್ತು ಪ್ರಿಂಟ್ ರೋಲ್‌ಗಳಂತಹ 52 ಪಾರ್ಸೆಲ್‌ಗಳಿಂದ ₹1 ಕೋಟಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ ಎಂದು ದೂರು ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು