ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gujarat Polls: ಬಿಜೆಪಿಯಿಂದ ಆರು ಬಾರಿಯ ಶಾಸಕ ಸೇರಿದಂತೆ 12 ಮುಖಂಡರ ಅಮಾನತು

Last Updated 23 ನವೆಂಬರ್ 2022, 5:13 IST
ಅಕ್ಷರ ಗಾತ್ರ

ಅಹಮದಾಬಾದ್: ಟಿಕೆಟ್ ದೊರೆಯದ ಕಾರಣ ಪಕ್ಷದ ವಿರುದ್ಧ ಬಂಡಾಯ ಎದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವ 12 ಮುಖಂಡರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ.

ಇದರಲ್ಲಿ ಗುಜರಾತ್ ವಿಧಾನಸಭೆಗೆ ಆರು ಬಾರಿ ಆಯ್ಕೆಯಾಗಿರುವ ಶಾಸಕರೂ ಸೇರಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆಗೆ ಕೇಲವೇ ದಿನಗಳಿರುವಂತೆಯೇ ಈ ಎಲ್ಲ ಬೆಳವಣಿಗೆಗಳು ಕಂಡುಬಂದಿವೆ.

ಗುಜರಾತ್ ಮೊದಲ ಹಂತದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಏಳು ಬಂಡಾಯ ಮುಖಂಡರನ್ನು ಬಿಜೆಪಿ ಅಮಾನತುಗೊಳಿಸಲಾಗಿತ್ತು. ಈಗ ಪಕ್ಷದ ವಿಪ್ ಉಲ್ಲಂಘಿಸಿ ಎರಡನೇ ಹಂತದ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿರುವ 12 ಮುಖಂಡರನ್ನು ಅಮಾನತು ಮಾಡಲಾಗಿದೆ.

ಇವರಲ್ಲಿ ಆರು ಬಾರಿಯ ಶಾಸಕ ಮಧು ಶ್ರೀವಾಸ್ತವ, ಮಾಜಿ ಶಾಸಕರಾದ ದಿನು ಪಟೇಲ್ ಹಾಗೂ ಧವಳ್‌ಸಿನ್ಹ್ ಝಾಲ, ಮುಖಂಡರಾದ ಕುಲದೀಪ್‌ಸಿಹ್ಹ್ ರೌಲ್, ಖಾತುಭಾಯಿ ಪಗಿ, ಎಸ್‌ಎಂ ಕಾಂತ್, ಜೆ.ಪಿ ಪಟೇಲ್, ರಮೇಶ್ ಝಾಲ, ಅಮರ್ಶಿ ಝಾಲ, ರಾಮ್‌ಸಿಂಗ್, ಮಾವ್ಜಿ ದೇಸಾಯಿ ಮತ್ತು ಲೆಬ್ಜಿ ಠಾಕೂರ್ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT