ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ವಿಡಿಯೊ ಮಾಡಿದ್ದವನನ್ನು ಪ್ರಶ್ನಿಸಿದ್ದಕ್ಕೆ ಬಿಎಸ್‌ಎಫ್ ಯೋಧನ ಹತ್ಯೆ

Last Updated 27 ಡಿಸೆಂಬರ್ 2022, 4:44 IST
ಅಕ್ಷರ ಗಾತ್ರ

ಅಹಮದಾಬಾದ್: ತಮ್ಮ ಮಗಳ ಅಶ್ಲೀಲ ವಿಡಿಯೊವನ್ನು ಶೇರ್ ಮಾಡುತ್ತಿದ್ದ ಯುವಕನ ವಿರುದ್ಧ ಪ್ರತಿಭಟಿಸಿದ ಬಿಎಸ್‌ಎಫ್‌ ಯೋಧನನ್ನು ಹೊಡೆದು ಕೊಂದಿರುವ ಘಟನೆ ಗುಜರಾತ್‌ನ ನಾಡಿಯಾಡ್‌ನಲ್ಲಿ ನಡೆದಿದೆ.

ಶನಿವಾರ ರಾತ್ರಿ ಬಿಎಸ್‌ಎಫ್ ಯೋಧ ಮೆಲಜಿ ವಾಘೇಲ, ತಮ್ಮ ಹೆಂಡತಿ, ಮಗ, ಸಂಬಂಧಿಯೊಬ್ಬರ ಜೊತೆ ವಾಣಿಪುರ್ ಹಳ್ಳಿಗೆ ತೆರಳಿ, ಮಗಳ ವಿಡಿಯೊ ಶೇರ್ ಮಾಡುತ್ತಿದ್ದ ಸುನಿಲ್ ಜಾಧವ್‌ನನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ವಿಡಿಯೊ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ.

ಈ ವೇಳೆ ವಾಘೇಲಾ ಕುಟುಂಬದ ಮೇಲೆ ಜಾಧವ್ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. ಜಾಧವ್ ತಂದೆ ಮತ್ತು ಇತರೆ 6 ಮಂದಿ ಮನೆಯ ಸದಸ್ಯರು ಸೇರಿ ವಾಘೇಲಾ ದಂಪತಿ ಮತ್ತು ಅವರ ಮಗನ ಮೇಲೆ ಕುಡಗೋಲು ಮತ್ತು ಕೋಲುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಬಳಿಕ, ಆಂಬುಲೆನ್ಸ್ ಮೂಲಕ ಮೂವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯೋಧನ ಪ್ರಾಣ ಉಳಿಯಲಿಲ್ಲ.

ಪ್ರಕರಣ ಸಂಬಂಧ ದಿನೇಶ್ ಜಾಧವ್, ಅರವಿಂದ್ ಜಾಧವ್, ಚಬಬಾಯ್ ಜಾಧವ್, ಸಚಿನ್ ಜಾಧವ್, ಭವೇಶ್ ಜಾಧವ್ ಮತ್ತು ಕೈಲಾಶ್ ಬೆನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಭಾನುವಾರ ಸಂಜೆ ಎಲ್ಲರನ್ನೂ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT