ಹಿಮಾಚಲಪ್ರದೇಶದಲ್ಲಿ ಹ್ಯಾಂಗಿಂಗ್ ರೆಸ್ಟೋರೆಂಟ್.. ಇಲ್ಲಿದೆ ಅದರ ವಿಶೇಷತೆ

ಶಿಮ್ಲಾ: ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಹಿಮಾಚಲಪ್ರದೇಶದ ಬಿಲಾಸ್‌ಪುರದ ಮಂಡಿ ಬರಾರಿ ಜಂಕ್ಷನ್‌ನಲ್ಲಿ ಹ್ಯಾಂಗಿಂಗ್ ರೆಸ್ಟೋರೆಂಟ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಇಲ್ಲಿನ ಪ್ರವಾಸಿ ಸಂಕೀರ್ಣದಲ್ಲಿ ಭಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯ(ಬಿಬಿಎಂಬಿ) ಸಹಕಾರದೊಂದಿಗೆ ಈ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಡಿಸಿ ಪಂಕಜ್ ರಾಯ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಬಿಬಿಎಂಬಿ ಸಹಯೋಗದೊಂದಿಗೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯ ವಿವರವಾದ ವರದಿಯನ್ನು ಜಿಲ್ಲಾಡಳಿತ ಸಿದ್ಧಪಡಿಸುತ್ತಿದೆ ಎಂದು ಅದು ಹೇಳಿದೆ.
ಏನೆಲ್ಲ ಇರಲಿದೆ?
ಈ ಹ್ಯಾಂಗಿಂಗ್ ರೆಸ್ಟೋರೆಂಟ್‌ನಲ್ಲಿ ಫುಡ್ ಪ್ಲಾಜಾ, ಅಗತ್ಯ ವಸ್ತುಗಳ ಅಂಗಡಿಗಳು, ಎಟಿಎಂ, ಶೌಚಾಲಯ, ಸ್ನಾನಗೃಹ, ವೈದ್ಯಕೀಯ ಸೌಲಭ್ಯ, ಮಕ್ಕಳಿಗಾಗಿ ಪಾರ್ಕ್ ಸೌಲಭ್ಯವಿರುತ್ತದೆ.
ಇದರ ಜೊತೆಗೆ ಸ್ಥಳೀಯ ಕೃಷಿ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಮಾರಾಟಕ್ಕೆ ಗ್ರಾಮೀಣ ಮಾರುಕಟ್ಟೆ ಸಹ ಇರಲಿದೆ.
ಶಿಮ್ಲಾ–ಚಂಬಾ ಮತ್ತು ಚಂಡೀಗಢದ–ಮನಾಲಿ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ ಉತ್ತಮ ಸೌಕರ್ಯ ಒದಗಿಸುವ ದೃಷ್ಟಿಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಡಿಸಿ ಹೇಳಿದರು.
ದೂರದ ಪ್ರಯಾಣದ ಸಮಯದಲ್ಲಿ ಢಾಬಾಗಳು ಮತ್ತು ಹೋಟೆಲ್‌ಗಳಲ್ಲಿ ವಿಶ್ರಾಂತಿಗಾಗಿ ತಂಗುತ್ತಾರೆ. ಈ ಪ್ರವಾಸಿ ತಂಗುದಾಣವು ಅತ್ಯಾಧುನಿಕ ಸೌಲಭ್ಯಗಳು, ದಾರಿಬದಿಯ ಸೌಕರ್ಯಗಳು ಮತ್ತು 100ಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್ ಸ್ಥಳದೊಂದಿಗೆ ಹೆಚ್ಚು ಬೇಡಿಕೆಯ ತಾಣಗಳಲ್ಲಿ ಒಂದಾಗಲಿದೆ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.