ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸ್‌ಗಢ: ನರ್ಸಿಂಗ್ ಕಾಲೇಜುಗಳಲ್ಲಿ ಮಹಿಳೆಯರಿಗೆ ಶೇ100 ಮೀಸಲಾತಿ ರದ್ದು

Last Updated 11 ಮಾರ್ಚ್ 2023, 16:30 IST
ಅಕ್ಷರ ಗಾತ್ರ

ಬಿಲಾಸ್‌ಪುರ: ಛತ್ತೀಸ್‌ಗಢ ಸರ್ಕಾರವು ರಾಜ್ಯದ ಸರ್ಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಯೋಗಾಲಯದ ಸಹಾಯಕರ ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 100ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ನೀಡಿರುವ ಜಾಹೀರಾತನ್ನು ಛತ್ತೀಸ್‌ಗಢ ಹೈಕೋರ್ಟ್ ಅಸಾಂವಿಧಾನಿಕ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ಹಾಗೂ ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, ಸರ್ಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಯೋಗಾಲಯದ ಸಹಾಯಕರು ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರು ಮಾತ್ರ ನೇರ ನೇಮಕಾತಿಗೆ ಅರ್ಹರು ಎಂದು ಹೇಳಿರುವ ಛತ್ತೀಸ್‌ಗಢ ವೈದ್ಯಕೀಯ ಶಿಕ್ಷಣ (ಗೆಜೆಟೆಡ್) ಸೇವಾ ನೇಮಕಾತಿ ನಿಯಮಗಳು–2013ರ ಶೆಡ್ಯೂಲ್ 3ರಲ್ಲಿನ ನಿಬಂಧನೆಯನ್ನು ರದ್ದುಗೊಳಿಸಿ ಆದೇಶ ನೀಡಿದೆ.

ಛತ್ತೀಸ್‌ಗಢ ಸರ್ಕಾರವು ನೀಡಿದ್ದ ಜಾಹೀರಾತನ್ನು ಪ್ರಶ್ನಿಸಿ ಅಭಯ್ ಕುಮಾರ್ ಕಿಸ್ಪೊಟ್ಟಾ, ಡಾ. ಅಜಯ್ ತ್ರಿಪಾಠಿ, ಅಲಿಯುಸ್ ಕ್ಯಾಲ್ಕ್ಸ್‌ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಅಲಿಸಿದ ನ್ಯಾಯಪೀಠವು ಗುರುವಾರ ಆದೇಶ ನೀಡಿದೆ ಎಂದು ಅರ್ಜಿದಾರರ ವಕೀಲರಾದ ಘನಶ್ಯಾಮ್ ಕಶ್ಯಪ್ ಮತ್ತು ನೆಲ್ಸನ್ ಪನ್ನಾ ಶನಿವಾರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT