ಭಾನುವಾರ, ಅಕ್ಟೋಬರ್ 25, 2020
28 °C

ಕೋವಿಡ್‌ ಮರಣದಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣ ಶೇ 47: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Covid-19

ನವದೆಹಲಿ: ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟವರ ಪೈಕಿ ಶೇ 47ರಷ್ಟು ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಮೃತರ ಪೈಕಿ ಶೇ 70ರಷ್ಟು ಪುರುಷ ಸೋಂಕಿತರು ಹಾಗೂ ಶೇ 30ರಷ್ಟು ಮಹಿಳಾ ಸೋಂಕಿತರು ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.

‘ಶೇ 53ರಷ್ಟು ಕೋವಿಡ್ ಮರಣಗಳು 60 ಮತ್ತು ಅದಕ್ಕಿಂತ ಮೇಲಿನ ವಯಸ್ಸಿನವರದ್ದಾಗಿದ್ದರೆ 45–60 ವರ್ಷ ವಯಸ್ಸಿನ ಶೇ 35ರಷ್ಟು ಸೋಂಕಿತರು ಮೃತಪಟ್ಟಿದ್ದಾರೆ. 26–44 ವಯಸ್ಸಿನವರಲ್ಲಿ ಶೇ 10ರಷ್ಟು ಸಾವು ಸಂಭವಿಸಿದೆ. 18–25 ವಯಸ್ಸಿನವರಲ್ಲಿ ಹಾಗೂ 17ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ತಲಾ ಶೇ 1ರಷ್ಟು ಮರಣ ಸಂಭವಿಸಿದೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Covid-19 Karnataka Update: 8,191 ಮಂದಿಗೆ ಸೋಂಕು, 87 ಸಾವು

60 ವರ್ಷಕ್ಕಿಂತ ಮೇಲಿನವರಲ್ಲಿ ಅನ್ಯ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದವರ ಸಾವಿನ ಪ್ರಮಾಣ ಶೇ 24.6ರಷ್ಟಿದ್ದರೆ ಇತರ ಯಾವುದೇ ಸಮಸ್ಯೆ ಇಲ್ಲದವರ ಮರಣ ಪ್ರಮಾಣ ಶೇ 4.8ರಷ್ಟಿದೆ.

ಒಟ್ಟು ಸಾವಿನ ಪ್ರಮಾಣದಲ್ಲಿ ಶೇ 17.9ರಷ್ಟು ಇತರ ಆರೋಗ್ಯ ಸಮಸ್ಯೆ ಹೊಂದಿರುವವರದ್ದಾಗಿದ್ದರೆ ಕೋವಿಡ್‌ನಿಂದ ಮಾತ್ರ ಸಾವಿಗೀಡಾದವರ ಪ್ರಮಾಣ ಶೇ 1.2ರಷ್ಟಿದೆ ಎಂದು ಭೂಷಣ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು