ಡಬ್ಲ್ಯುಎಚ್ಒ ಪ್ರಮುಖ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಭೂಷಣ್ ನೇಮಕ

ನವದೆಹಲಿ: ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರನ್ನು 75 ನೇ ವಿಶ್ವ ಆರೋಗ್ಯ ಅಧಿವೇಶನದ ಪ್ರಮುಖ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ವಿಶ್ವ ಆರೋಗ್ಯ ಅಧಿವೇಶನವು ಸಮಿತಿ– ಎ ಮತ್ತು ಸಮಿತಿ– ಬಿ ಎಂಬ ಎರಡು ಸಮಿತಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಭೂಷಣ್ ಅವರು ಸಮಿತಿ– ಬಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಡಬ್ಲ್ಯುಎಚ್ಒ ಟ್ವೀಟ್ ಮಾಡಿದೆ.
ಸಮಿತಿ– ಎ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ತಾಂತ್ರಿಕ ಮತ್ತು ಆರೋಗ್ಯ ವಿಷಯಗಳ ಬಗ್ಗೆ ಹಾಗೂ ಸಮಿತಿ– ಬಿ ಪ್ರಾಥಮಿಕವಾಗಿ ಸಂಸ್ಥೆಯ ಆಡಳಿತಾತ್ಮಕ ಮತ್ತು ಹಣಕಾಸಿನ ವಿಷಯಗಳ ಕುರಿತು ಚರ್ಚಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
194 ಸದಸ್ಯ ರಾಷ್ಟ್ರಗಳು ಭಾಗವಹಿಸಿರುವ ಡಬ್ಲ್ಯುಎಚ್ಒ ಅಧಿವೇಶನವು ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ಮೇ 22 ರಿಂದ ಆರಂಭವಾಗಿದ್ದು, ಮೇ 28 ರವರೆಗೆ ನಡೆಯಲಿದೆ. ಪ್ರತಿ ವರ್ಷ ಅಧಿವೇಶನದಲ್ಲಿ ಆರೋಗ್ಯ ವಿಷಯ ಕುರಿತ ಸವಾಲುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಪರಿಶೀಲನೆ ನಡೆಯುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.