ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ; ಬಿಸಿಗಾಳಿಯ ಅಪಾಯ

Last Updated 30 ಮಾರ್ಚ್ 2021, 6:08 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ 13 ಪ್ರದೇಶಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಇದರ ಪರಿಣಾಮ ಬಿಸಿಗಾಳಿ ಸೃಷ್ಟಿಯಾಗಿದೆ. ಮುಂದಿನ ಎರಡು ದಿನಗಳಲ್ಲಿ ತಾಪಮಾನ ಎರಡರಿಂದ ಮೂರು ಡಿಗ್ರಿಯಷ್ಟು ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಟಿಟಿಲಾಗಢದಲ್ಲಿ ಅತಿ ಹೆಚ್ಚು, 42.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಒಡಿಶಾದ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಏಪ್ರಿಲ್‌ 1ರ ವರೆಗೂ ಬಿಸಿಗಾಳಿಯ ಎಚ್ಚರಿಕೆ ರವಾನಿಸಿದ್ದು, ಮುಂದಿನ ಎರಡು ದಿನಗಳು ಉಷ್ಣಾಂಶದಲ್ಲಿ ಗರಿಷ್ಠ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದೆ.

ಬಾರಿಪದಾದಲ್ಲಿ ಶೇ 42 ಡಿಗ್ರಿ ಸೆಲ್ಸಿಯಸ್‌, ಬಲಾಂಗಿರ್‌ನಲ್ಲಿ ಶೇ 41.5 ಡಿಗ್ರಿ, ಝಾರ್ಸುಗುಡಾ ಮತ್ತು ಸಂಬಾಲ್ಪುರ್‌ನಲ್ಲಿ ಶೇ 41.2 ಡಿಗ್ರಿ, ಅನುಗುಲ್‌ ಮತ್ತು ಹಿರಾಕುದ್‌ನಲ್ಲಿ ಶೇ 41.1 ಡಿಗ್ರಿ, ಮಲ್ಕಾಂಗಿರಿಯಲ್ಲಿ 41 ಡಿಗ್ರಿ, ಭುವನೇಶ್ವರದಲ್ಲಿ 40.5 ಡಿಗ್ರಿ, ನಯಾಗಢ ಮತ್ತು ತಾಲ್ಚೇರ್‌ನಲ್ಲಿ 40.2 ಡಿಗ್ರಿ, ಬಾಲೇಶ್ವರ್ ಮತ್ತು ಕಟಕ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಕೆಲವು ಜಿಲ್ಲೆಗಳಲ್ಲಿ ಮಂಗಳಾರದಿಂದ ಏಪ್ರಿಲ್‌ 1ರ ಬೆಳಿಗ್ಗೆ 8:30ರ ವರೆಗೂ ಬಿಸಿಗಾಳಿಯ ಪರಿಣಾಮ ಎದುರಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಹೇಳಿದೆ. ಜಿಲ್ಲಾಡಳಿತಗಳು ಬಿಸಿಗಾಳಿ ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಸಿದ್ಧತೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT