ಗುರುವಾರ , ಆಗಸ್ಟ್ 18, 2022
27 °C

ಬುಲ್ಡೋಜರ್‌ ಬಳಸಿ ಅಲ್ಪಸಂಖ್ಯಾತರ ಮನೆ ಕೆಡವಿದಂತೆ ಕಾಶ್ಮೀರದಲ್ಲಿ ಆಗಲ್ಲ: ಮುಫ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಸಹಯೋಗದಲ್ಲಿ ನಡೆಯುತ್ತಿರುವ ಶಾಲೆಯೊಂದರ ಶಿಕ್ಷಕಿಯರಿಗೆ 'ಹಿಜಾಬ್‌' ಧರಿಸದಂತೆ ತಾಕೀತು ಮಾಡಿದ ವಿಚಾರಕ್ಕೆ ಸಂಬಂಧಿಸಿ, 'ಬೇರೆ ರಾಜ್ಯಗಳಲ್ಲಿ ಬುಲ್ಡೋಜರ್‌ ಬಳಸಿ ಅಲ್ಪಸಂಖ್ಯಾತರ ಮನೆಗಳನ್ನು ಕೆಡವಿದಂತೆ ಹಾಗೂ ಹೆಣ್ಣುಮಕ್ಕಳ ಹಕ್ಕನ್ನು ಕಿತ್ತುಕೊಂಡಂತೆ ಇಲ್ಲಿ ಆಗುವುದಿಲ್ಲ' ಎಂದು ಮಾಜಿ ಸಿಎಂ ಮೆಹಬೂಬ ಮುಫ್ತಿ ಹೇಳಿದ್ದಾರೆ.

'ಹಿಜಾಬ್‌ ಧರಿಸದಂತೆ ಆದೇಶಿಸಿದ ನಡೆಯನ್ನು ವಿರೋಧಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಆಳುತ್ತಿರಬಹುದು. ಆದರೆ ಇದು ಖಂಡಿತವಾಗಿಯೂ ಬುಲ್ಡೋಜರ್‌ಗಳ ಮೂಲಕ ಅಲ್ಪಸಂಖ್ಯಾತರ ಮನೆಗಳನ್ನು ಕೆಡವುತ್ತಿರುವ ಮತ್ತು ಅವರಿಷ್ಟದಂತೆ ಬಟ್ಟೆ ಧರಿಸುವ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವ ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಂತಲ್ಲ. ನಮ್ಮ ಹೆಣ್ಣುಮಕ್ಕಳು ತಮ್ಮ ವಸ್ತ್ರ ಆಯ್ಕೆಯ ಹಕ್ಕನ್ನು ಬಿಟ್ಟುಕೊಡುವುದಿಲ್ಲ' ಎಂದು ಮಾಜಿ ಸಿಎಂ ಮೆಹಬೂಬ ಮುಫ್ತಿ ಟ್ವೀಟ್‌ ಮಾಡಿದ್ದಾರೆ.

ಉತ್ತರ ಕಾಶ್ಮೀರದ ಬಾರಾಮುಲ್ಲ ನಗರದಲ್ಲಿ ಭಾರತೀಯ ಸೇನೆಯ ಸಹಯೋಗದೊಂದಿಗೆ ಸ್ವಯಂಸೇವಾ ಸಂಸ್ಥೆಯೊಂದು ನಡೆಸುತ್ತಿರುವ ಅಂಗವಿಕಲ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯರಿಗೆ ಹಿಜಾಬ್‌ ಧರಿಸದಂತೆ ಆಡಳಿತ ಮಂಡಳಿ ತಾಕೀತು ಮಾಡಿತ್ತು. ಶಾಲಾ ಆಡಳಿತ ಮಂಡಳಿಯ ನಡೆಯು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಬುಧವಾರ ಸುತ್ತೋಲೆಯನ್ನು ತಿದ್ದುಪಡಿ ಮಾಡಿ ಪ್ರಕಟಿಸಿದೆ. ಹಿಜಾಬ್‌ ಪದವನ್ನು ತೆಗೆದು, ನಕಾಬ್‌ (ಮುಖಪರದೆ) ಪದವನ್ನು ಬಳಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು