Himachal Polls:34ನೇ ಸಲ ಮತದಾನ ಮಾಡಿದ 106 ವರ್ಷದ ಸ್ವತಂತ್ರಭಾರತದ ಮೊದಲ ಮತದಾರ

ಶಿಮ್ಲಾ: ಸ್ವತಂತ್ರ ಭಾರತದ ಮೊತ್ತ ಮೊದಲ ಮತದಾರ 106 ವರ್ಷದ ಶ್ಯಾಮ್ ಶರಣ್ ನೇಗಿ ಹಿಮಾಚಲ ಪ್ರದೇಶದ ವಿಧಾನಸಭೆ ಚನಾವಣೆಗೆ 34ನೇ ಸಲ ಮತದಾನ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಬುಡಕಟ್ಟು ಕಿನ್ನೌರ್ ಜಿಲ್ಲೆಯ ಶ್ಯಾಮ್ ಶರಣ್ ನೇಗಿ, ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಿದ ಮೊತ್ತಮೊದಲ ಮತದಾರ ಆಗಿದ್ದಾರೆ.
ಇದನ್ನೂ ಓದಿ: ದೇಶದ ಮೊದಲ ಮತದಾರನನ್ನು ಚುನಾವಣಾ ಆಯೋಗ ಪತ್ತೆ ಮಾಡಿದ್ದು ಹೀಗೆ...
ವೃತ್ತಿಯಲ್ಲಿ ಶಿಕ್ಷಕರಾಗಿದ್ದ ನೇಗಿ, 14ನೇ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ಕಲ್ಪಾದಲ್ಲಿರುವ ತಮ್ಮ ಮನೆಯಲ್ಲಿ ಅಂಚೆ ಮೂಲಕ ಮತದಾನದ ಹಕ್ಕು ಚಲಾಯಿಸಿದರು.
1917ರ ಜುಲೈಯಲ್ಲಿ ಜನಿಸಿದ ನೇಗಿ ಅವರು 1951ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು. ಈವರೆಗೆ ಲೋಕಸಭೆಯಲ್ಲಿ 16 ಬಾರಿ ಮತ್ತು 1951ರ ನಂತರ ಪ್ರತಿ ಲೋಕಸಭೆ, ವಿಧಾನಸಭೆ ಮತ್ತು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮತ ಚಲಾಯಿಸಿದ್ದಾರೆ. 2014ರಲ್ಲಿ ಅವರನ್ನು ಹಿಮಾಚಲ ಪ್ರದೇಶದ ರಾಜ್ಯ ಚುನಾವಣೆ ಐಕಾನ್ ಆಗಿ ಗುರುತಿಸಲಾಗಿತ್ತು.
ಮತದಾನದ ಬಳಿಕ ಪ್ರತಿಕ್ರಿಯಿಸಿರುವ ಅವರು, ಪ್ರಜಾತಂತ್ರವನ್ನು ಬಲಗೊಳಿಸಲು ಎಲ್ಲರೂ ಮತದಾನದ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು.
ಹಿಮಾಚಲದಲ್ಲಿ ಅಂಚೆ ಮೂಲಕ ಮತದಾನ ನವೆಂಬರ್ 1ರಿಂದ ಆರಂಭವಾಗಿದ್ದು, ನ.11ರಂದು ಪೂರ್ಣಗೊಳ್ಳಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.