ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಹಿಂದೂ ಪ್ರಾಬಲ್ಯ ಅಚಲವಾಗಿರಬೇಕು:ಜನಸಂಖ್ಯಾ ನಿಯಂತ್ರಣದ ಬಗ್ಗೆ ವಿಎಚ್‌ಪಿ

Last Updated 16 ಜುಲೈ 2021, 15:33 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಹಿಂದೂ ಪ್ರಾಬಲ್ಯ ಅಚಲವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಶುಕ್ರವಾರ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ಒಂದು ಕುಟುಂಬದಲ್ಲಿ ಕೇವಲ ಒಂದು ಮಗು ಮಾತ್ರ ಇದ್ದರೆ ಹಿಂದೂಗಳ ಜನಸಂಖ್ಯೆಯು ಹಿಂದೂಗಳಿಂದಲೇ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ನಾವು ಜನಸಂಖ್ಯಾ ನಿಯಂತ್ರಣದ ಬಗ್ಗೆ ಚರ್ಚಿಸುವಾಗ, ದೇಶದಲ್ಲಿ ಹಿಂದೂ ಸಮಾಜದ ಪ್ರಾಬಲ್ಯವು ಅಚಲವಾಗಿರಬೇಕು. ಹಿಂದೂಗಳಿಂದ ದೇಶದಲ್ಲಿ ರಾಜಕೀಯ, ಜಾತ್ಯತೀತತೆ, ಸಹಿಷ್ಣುತೆ
ಸೇರಿದಂತೆ ಎಲ್ಲ ತತ್ವಗಳನ್ನು ಪಾಲಿಸಲಾಗುತ್ತಿದೆ' ಎಂದು ಹೇಳಿದರು.

ಅದೇ ಹೊತ್ತಿಗೆ ದೇಶದಲ್ಲಿ ಹಿಂದೂಗಳಪ್ರಾಬಲ್ಯವನ್ನು ಖಚಿತಪಡಿಸಬೇಕಿದೆ ಎಂದವರು ಪ್ರತಿಪಾದಿಸಿದರು.

'ಹಿಂದೂ ಕುಟುಂಬದಲ್ಲಿ ಕನಿಷ್ಠ ಇಬ್ಬರು ಮಕ್ಕಳು ಇರಬೇಕು ಎಂಬುದನ್ನು ಯೋಚಿಸಲೇಬೇಕು. ಏಕೆಂದರೆ ಒಂದು ಕುಟುಂಬದಲ್ಲಿ ಒಂದು ಮಗು ಮಾತ್ರ ಇದ್ದರೆ, ಹಿಂದೂಗಳ ಜನಸಂಖ್ಯೆಯು ಹಿಂದೂಗಳಿಂದಲೇ ಕಡಿಮೆಯಾಗುತ್ತದೆ' ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್‌ನ ಆಡಳಿತ ಮತ್ತು ಟ್ರಸ್ಟಿಗಳ ಎರಡು ದಿನಗಳ ಸಭೆಯು ಶನಿವಾರದಿಂದ ಫರಿದಾಬಾದ್‌ನಲ್ಲಿ ನಡೆಯಲಿದೆ. ಈ ವೇಳೆಗೆ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT