ಮಂಗಳವಾರ, ಮಾರ್ಚ್ 28, 2023
33 °C

ಮೇಘಾಲಯ: ಎಚ್‌ಎನ್‌ಎಲ್‌ಸಿ ಉಗ್ರನ ಶರಣಾಗತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಿಲಾಂಗ್‌: ನಿಷೇಧಿತ ಹಿನ್ನೀವ್‌ಟ್ರೆಪ್‌ ನ್ಯಾಷನಲ್‌ ಲಿಬರೇಷನ್‌ ಕೌನ್ಸಿಲ್‌ಗೆ (ಎಚ್‌ಎನ್‌ಎಲ್‌ಸಿ) ಸೇರಿದ ಉಗ್ರನೊಬ್ಬ ಮೇಘಾಲಯದ ಈಸ್ಟ್‌ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಶರಣಾಗಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಮ್ಯಾನ್ಯುಯಲ್‌ ಸುಚೆನ್‌ ಎಂಬಾತನೇ ಶರಣಾಗತನಾದ ಉಗ್ರ. ಈ ವರ್ಷದ ಆರಂಭದಲ್ಲಿ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕದೊಂದಿಗೆ ದಾಳಿ ನಡೆಸಿದ ಎರಡು ಪ್ರಕರಣಗಳಿಗೆ ಸಂಬಂಧಿಸಿದ ಆರೋಪ ಈತನ ಮೇಲಿತ್ತು.

ಸುಚೆನ್‌ 2002ರಲ್ಲಿ ಎಚ್‌ಎನ್‌ಎಲ್‌ಸಿ ಸಂಘಟನೆ ಸೇರಿದ್ದ. 2008ರಲ್ಲಿ ಆತನನ್ನು ಬಂಧಿಸಲಾಗಿತ್ತು. ಮೂರು ವರ್ಷಗಳ ಬಳಿಕ ಆತನ ಬಿಡುಗಡೆಯಾಗಿತ್ತು. ಮತ್ತೆ ಆತ ಉಗ್ರ ಸಂಘಟನೆ ಸೇರಿಕೊಂಡಿದ್ದ ಎಂಧು ರಾಜ್ಯದ ಗೃಹ ಸಚಿವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು