ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಥರಸ್‌ ಸಂತ್ರಸ್ತೆ ನ್ಯಾಯ ಪಡೆಯಲು ಅರ್ಹಳೇ ಹೊರತು ಅಪನಿಂದೆಗೆ ಅಲ್ಲ: ಪ್ರಿಯಾಂಕಾ

Last Updated 8 ಅಕ್ಟೋಬರ್ 2020, 8:06 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ಹಾಥರಸ್‌ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನ್ಯಾಯ ಪಡೆಯಲು ಅರ್ಹಳೇ ಹೊರತು ದೂಷಣೆಗೆ ಅಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಗುರುವಾರ ಟ್ವೀಟ್‌ ಮಾಡಿರುವ ಅವರು, ‘ದೌರ್ಜನ್ಯಕ್ಕೊಳಗಾದ ಮಹಿಳೆಯ ಚಾರಿತ್ರ್ಯ ಹರಣ ಮಾಡುವ ಅಭಿಪ್ರಾಯ ರೂಪಿಸುವುದು ಮತ್ತು ಅವಳ ಮೇಲಿನ ದೌರ್ಜನ್ಯಕ್ಕೆ ಹೇಗಾದರೂ ಅವಳನ್ನೇ ಹೊಣೆಗಾರಳನ್ನಾಗಿ ಮಾಡುವುದು ರೊಚ್ಚಿಗೇಳಿಸುವ, ಕೀಳುಮಟ್ಟದ ನಡವಳಿಕೆ,’ ಎಂದು ಪ್ರಿಯಾಂಕಾ ವಿಶ್ಲೇಷಿಸಿದ್ದಾರೆ.

‘ಹಾಥರಸ್‌ನಲ್ಲಿ ಅತ್ಯಂತ ಹೇಯ ಅಪರಾಧ ಸಂಭವಿಸಿದೆ. 20 ವರ್ಷದ ದಲಿತ ಯುವತಿ ಅಲ್ಲಿ ಸತ್ತಿದ್ದಾಳೆ. ಅವಳ ಕುಟುಂಬಸ್ಥರ ಪಾಲ್ಗೊಳ್ಳುವಿಕೆಯೇ ಇಲ್ಲದೇ ಅವಳ ಅಂತ್ಯಸಂಸ್ಕಾರವನ್ನೂ ಮಾಡಲಾಗಿದೆ. ಆಕೆ ನ್ಯಾಯ ಪಡೆಯಲು ಅರ್ಹಳೇ ಹೊರತು, ದೂಷಣೆಗೆ ಅಲ್ಲ,’ ಎಂದು ಪ್ರಿಯಾಂಕಾ ಟ್ವೀಟ್‌ ಮಾಡಿದ್ದಾರೆ.

‘ಬೇಶರ್ಮ್‌ ಬಿಜೆಪಿ’ (ನಿರ್ಲಜ್ಜ ಬಿಜೆಪಿ) ಹ್ಯಾಶ್‌ಟ್ಯಾಗ್‌ ಬಳಸುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಮುಖಂಡರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹ್ಯಾಶ್‌ಟ್ಯಾಗ್‌ ಟ್ವಿಟರ್‌ನಲ್ಲಿ ಗುರುವಾರ ಟ್ರೆಂಡಿಂಗ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT