ಭಾನುವಾರ, ಮೇ 22, 2022
23 °C

ದೆಹಲಿಯಲ್ಲಿ ಮದ್ಯದ ಹೋಮ್ ಡೆಲಿವರಿ.. ಸಂಪುಟ ಸಭೆ ಅನುಮೋದನೆ ಬಳಿಕ ಜಾರಿ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶೀಘ್ರದಲ್ಲೇ ಮದ್ಯದ ಹೋಮ್ ಡೆಲಿವರಿ ಜಾರಿಯಾಗುವ ಸಾಧ್ಯತೆ ಇದೆ. ಸಚಿವರ ಸಮಿತಿಯು ಮದ್ಯದ ಹೋಮ್ ಡೆಲಿವರಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಚಿಲ್ಲರೆ ಮಾರಾಟದ ಮದ್ಯದಂಗಡಿಗಳ ಹೊರಗೆ ಜನಸಂದಣಿ ಮತ್ತು ಕೆಲ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ದೆಹಲಿ ಸರ್ಕಾರವು ಇತ್ತೀಚೆಗೆ ಮದ್ಯದ ಮೇಲಿನ ರಿಯಾಯಿತಿಯನ್ನು ಶೇಕಡ 25ಕ್ಕೆ ಮಿತಿಗೊಳಿಸಿತ್ತು.

2022-23ರ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಚಿವರ ಸಮಿತಿ ಮಾಡಿರುವ ಹೋಮ್ ಡೆಲಿವರಿ ಪ್ರಸ್ತಾವ ಮತ್ತು ಇತರ ಶಿಫಾರಸುಗಳನ್ನು ದೆಹಲಿ ಕ್ಯಾಬಿನೆಟ್‌ನ ಅನುಮೋದನೆಗಾಗಿ ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿನ ಚಿಲ್ಲರೆ ಮದ್ಯದ ಮಾರಾಟಗಾರರಿಗೆ ಹೋಮ್ ಡೆಲಿವರಿ ಮಾಡಲು ಅನುಮತಿಸಬಹುದು ಎಂದು ಮಂತ್ರಿಗಳ ಸಮಿತಿ ಶಿಫಾರಸು ಮಾಡಿರುವುದಾಗಿ ಕಳೆದ ತಿಂಗಳು ನಡೆದ ಸಭೆಯನ್ನು ಉಲ್ಲೇಖಿಸಿ ಅಧಿಕೃತ ಮೂಲಗಳು ಹೇಳಿವೆ.

ಸಾಂಕ್ರಾಮಿಕ ಅಥವಾ ತುರ್ತು ಪರಿಸ್ಥಿತಿಯ ಲಾಕ್‌ಡೌನ್‌ ಸಮಯದಲ್ಲಿ ಮದ್ಯದ ಪೂರೈಕೆಯನ್ನು ಖಚಿತಪಡಿಸಲು, ಮದ್ಯದ ಸಮಾನ ವಿತರಣೆ, ನಕಲಿ ಮದ್ಯ ಸೇವನೆ ಮತ್ತು ಅಂತರ ರಾಜ್ಯ ಕಳ್ಳಸಾಗಣೆಯನ್ನು ಪರಿಶೀಲಿಸಲು ಹೋಮ್ ಡೆಲಿವರಿ ಸೂಕ್ತ ಪರ್ಯಾಯವಾಗಿದೆ ಎಂದೂ ಸಚಿವರ ಸಮಿತಿ ಹೇಳಿದೆ.

ಸಮಿತಿಯ ಈ ಪ್ರಸ್ತಾವಕ್ಕೆ ದೆಹಲಿ ಸಚಿವ ಸಂಪುಟ ಸಭೆಯ ಅನುಮತಿ ಸಿಕ್ಕ ಬಳಿಕ ಅಬಕಾರಿ ಇಲಾಖೆಯು ಈ ಕುರಿತಂತೆ ವಿವರವಾದ ನಿಯಮಾವಳಿ ರೂಪಿಸಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು