ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಹೆಸರಿಸಿದ ಗೃಹ ಸಚಿವಾಲಯ

Last Updated 5 ಅಕ್ಟೋಬರ್ 2022, 5:15 IST
ಅಕ್ಷರ ಗಾತ್ರ

ನವದೆಹಲಿ: ಹಿಜ್ಬುಲ್‌ ಮುಜಾಹಿದ್ದೀನ್‌ (ಎಚ್ಎಂ), ಲಷ್ಕರ್‌ ಎ ತಯಬಾ (ಎಲ್‌ಇಟಿ) ಮತ್ತು ಇತರ ಸಂಘಟನೆಗಳಿಗೆ ಸೇರಿದ 10 ಮಂದಿಯನ್ನು ಭಯೋತ್ಪಾದಕರು ಎಂದು ಕೇಂದ್ರ ಗೃಹ ಸಚಿವಾಲಯ ಹೆಸರಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ.

1. ಹಬಿಬುಲ್ಲಾ ಮಲಿಕ್‌ ಅಲಿಯಾಸ್‌ ಸಾಜಿದ್‌ ಜಟ್‌, ಪಾಕಿಸ್ತಾನದ ನಾಗರಿಕ
2. ಬಸಿತ್‌ ಅಹ್ಮದ್‌ ರೆಶಿ, ಬಾರಾಮುಲ್ಲಾ
3. ಇಮ್ತಿಯಾಜ್‌ ಅಹ್ಮದ್‌ ಕಂಡೂ ಅಲಿಯಾಸ್‌ ಸಾಜದ್‌, ಸೊಪೋರ್‌
4. ಜಾಫರ್‌ ಇಕ್ಬಾಲ್‌ ಅಲಿಯಾಸ್‌ ಸಲೀಮ್‌, ಪೂಂಜ್‌
5. ಜಮೀಲ್‌ ಉರ್‌ ರೆಹ್ಮನ್‌ ಅಲಿಯಾಸ್‌ ಶೇಖ್‌ ಸಾಹಬ್‌, ಪುಲ್ವಾಮಾ
6. ಬಿಲಾಲ್‌ ಅಹ್ಮದ್‌ ಬೇಗ್‌ ಅಲಿಯಾಸ್‌ ಬಾಬರ್‌, ಶ್ರೀನಗರ
7. ರಫಿಕ್‌ ನೈ ಅಲಿಯಾಸ್ ಸುಲ್ತಾನ್‌, ಪೂಂಚ್‌
8. ಈರ್ಶಾದ್‌ ಅಹ್ಮದ್‌ ಅಲಿಯಾಸ್ ಈದ್ರೀಸ್‌, ದೊಡಾ
9. ಬಶೀರ್‌ ಅಹ್ಮದ್‌ ಪೀರ್‌ ಅಲಿಯಾಸ್‌ ಇಮ್ತಿಯಾಜ್‌, ಕುಪ್ವಾರಾ
10. ಶೋಕತ್‌ ಅಹ್ಮದ್‌ ಶೇಖ್‌ ಅಲಿಯಾಸ್‌ ಶೋಕತ್‌ ಮೋಚಿ, ಬಾರಾಮುಲ್ಲಾ

ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವವರ ಪೈಕಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದ ಮೂಲ ನಿವಾಸಿಗಳಾಗಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ಕೇಂದ್ರ ಮಾಹಿತಿ ನೀಡಿದೆ.

ಹಬಿಬುಲ್ಲಾ ಮಲಿಕ್‌ನನ್ನು ಪೂಂಚ್‌ನಲ್ಲಿ ಸೈನಿಕರ ಮೇಲೆ ನಡೆದ ದಾಳಿಯ ಪ್ರಮುಖ ರೂವಾರಿ ಎಂದು ಉಲ್ಲೇಖಿಸಲಾಗಿದೆ. ಜಮ್ಮು ಪ್ರದೇಶದಲ್ಲಿ ಉಗ್ರರಿಗೆ ಡ್ರೋನ್‌ ಮೂಲಕ ಶಸ್ತ್ರಾಸ್ತ್ರಗಳನ್ನು ಮತ್ತು ಸಂವಹನ ಉಪಕರಣಗಳನ್ನು ತಲುಪಿಸಲು ನಡೆಸಿದ ಪ್ರಯತ್ನದಲ್ಲೂ ಈತನೇ ಪ್ರಮುಖ ಸೂತ್ರಧಾರಿ. ಕಾಶ್ಮೀರ ಕಣಿವೆಯಲ್ಲಿ ನಡೆದ ಅನೇಕ ವಿಧ್ವಂಸಕ ಕೃತ್ಯಗಳ ಹಿಂದೆ ಮಲಿಕ್‌ ಕೈವಾಡವಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT