ಬುಧವಾರ, ಡಿಸೆಂಬರ್ 2, 2020
23 °C
ಕೆಲವು ಪ್ರಯಾಣಿಕರಿಗೆ ಕೋವಿಡ್‌ ಸೋಂಕು

ಹಾಂಗ್‌ಕಾಂಗ್‌ನಲ್ಲಿ ಏರ್‌ ಇಂಡಿಯಾ ವಿಮಾನಗಳಿಗೆ ನಿರ್ಬಂಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೆಲವು ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಕಾರಣ, ಹಾಂಗ್‌ಕಾಂಗ್‌ ಸರ್ಕಾರ ಆಗಸ್ಟ್‌ ಅಂತ್ಯದವರೆಗೆ ಎಲ್ಲ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿದೆ.

ಏರ್‌ ಇಂಡಿಯಾ ವಿಮಾನವೊಂದರಲ್ಲಿ ಹಾಂಕಾಂಗ್‌ಗೆ ಬಂದ ಕೆಲವು ಪ್ರಯಾಣಿಕರಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ, ತನ್ನ ದೇಶಕ್ಕೆ ಬರುವ ಎಲ್ಲ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ತಿಂಳಾಂತ್ಯದವರೆಗೆ ನಿರ್ಬಂಧಿಸಿದೆ.

ಹಾಂಗ್ ಕಾಂಗ್ ಸರ್ಕಾರದ ನಿಯಮಗಳ ಪ್ರಕಾರ ಭಾರತದ ಹೊರತುಪಡಿಸಿ, ಬಾಂಗ್ಲಾದೇಶ, ಇಂಡೋನೇಷ್ಯಾ, ಕಜಕಿಸ್ತಾನ್, ನೇಪಾಳ, ಪಾಕಿಸ್ತಾನ, ಫಿಲಿಪ್ಪಿನ್ಸ್‌, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಿಂದ ಬರುವ ಎಲ್ಲ ಪ್ರಯಾಣಿಕರು, ಪ್ರಯಾಣಕ್ಕೆ ಮುನ್ನ ಕೋವಿಡ್‌ ನೆಗೆಟಿವ್‌ ಇರುವ ವರದಿ ನೀಡುವುದು ಕಡ್ಡಾಯ.

ಹಾಂಕಾಂಗ್‌ ಸರ್ಕಾರ ಜುಲೈ ತಿಂಗಳಲ್ಲಿ ಪ್ರಕಟಿಸಿದ ಮಾರ್ಗಸೂಚಿ ಪ್ರಕಾರ, ಭಾರತದಿಂದ ಬರುವ ಪ್ರಯಾಣಿಕರು 72 ಗಂಟೆಗಳ ಮೊದಲು ಕೋವಿಡ್‌ ನೆಗೆಟಿವ್‌ ಇರುವ ಪ್ರಮಾಣ ಪತ್ರವನ್ನು ಪಡೆದಿರಬೇಕೆಂದು ಹೇಳಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು