ಚಿಕಾಗೊದಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯ ಮೇಲೆ ಗುಂಡಿನ ದಾಳಿ

ಹೈದರಾಬಾದ್: ಅಮೆರಿಕದ ಚಿಕಾಗೊದಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಮೊಹಮ್ಮದ್ ಮುಜಿಬುದ್ದೀನ್ ಅವರ ಮೇಲೆ ಸೋಮವಾರ ಗುಂಡು ಹಾರಿಸಲಾಗಿದ್ದು, ಅವರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ಮುಜಿಬುದ್ದೀನ್ ಅವರ ಪತ್ನಿ, ತೆಲಂಗಾಣದ ಐ.ಟಿ ಸಚಿವರಿಗೆ ಪತ್ರ ಬರೆದಿದ್ದಾರೆ.
ಮುಜಿಬುದ್ದೀನ್ ಅವರು ತಾಯಿ, ಪತ್ನಿ ಮತ್ತು ಮಕ್ಕಳು ಹೈದರಾಬಾದ್ನಲ್ಲಿದ್ದಾರೆ.
ಈ ಘಟನ ಬಗ್ಗೆ ಮುಜಿಬುದ್ದೀನ್ ಜತೆ ಅಲ್ಲಿರುವ ವ್ಯಕ್ತಿ ನಮಗೆ ತಿಳಿಸಿದರು ಎಂದು ಅವರ ಪತ್ನಿ ಹೇಳಿದ್ದಾರೆ.
‘ನಮ್ಮ ಕುಟುಂಬವು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದೆ. ಅಮೆರಿಕದಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ಅಮೆರಿಕದ ಭಾರತೀಯ ರಾಯಭಾರಿ ಕಚೇರಿ ಹಾಗೂ ಕಾನ್ಸಲೇಟ್ ಕಚೇರಿ ನನ್ನ ಪತಿಗೆ ವೈದ್ಯಕೀಯ ಸಹಾಯವನ್ನು ಕಲ್ಪಿಸಬೇಕು’ ಎಂದು ಮುಜಿಬುದ್ದೀನ್ ಪತ್ನಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ ಕುಟುಂಬಸ್ಥರಿಗೆ ಅಮೆರಿಕಕ್ಕೆ ಪ್ರಯಾಣಿಸಲು ತುರ್ತು ವೀಸಾ ನೀಡುವ ಬಗ್ಗೆ ಹೈದರಾಬಾದ್ನಲ್ಲಿರುವ ಅಮೆರಿಕದ ಕಾನ್ಸಲೇಟ್ ಅವರ ಜತೆ ಮಾತನಾಡಬೇಕು ಎಂದು ಸಚಿವರ ಬಳಿ ಮನವಿ ಮಾಡಿದ್ದಾರೆ.
ನಗರ ಮೂಲದ ಮಜ್ಲಿಸ್ ಬಚಾವೊ ತೆಹ್ರೀಕ್ (ಎಂಬಿಟಿ) ನಾಯಕ ಅಮ್ಜೇದ್ ಉಲ್ಲಾ ಖಾನ್ ಅವರು ಕೂಡ ಮುಜಿಬುದ್ದೀನ್ಗೆ ಸಹಾಯ ಕಲ್ಪಿಸಲು ಭಾರತೀಯ ರಾಯಭಾರಿ ಕಚೇರಿಗೆ ಸೂಚಿಸುವಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.