ನಾನಲ್ಲ, ಮಹಿಳೆಯೇ ಮೂತ್ರ ಮಾಡಿಕೊಂಡಿರಬಹುದು: ಕೋರ್ಟ್‌ಗೆ ಶಂಕರ್ ಮಿಶ್ರಾ ಹೇಳಿಕೆ

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕ ವೃದ್ಧ ಮಹಿಳೆ ಮೇಲೆ ಮೂತ್ರ ಮಾಡಿದ ಆರೋಪವನ್ನು ಶಂಕರ್ ಮಿಶ್ರಾ ದೆಹಲಿ ನ್ಯಾಯಾಲಯದಲ್ಲಿ ತಳ್ಳಿ ಹಾಕಿದ್ದಾರೆ.
ಕಳೆದ ವರ್ಷ ನವೆಂಬರ್ 26ರಂದು ಏರ್ ಇಂಡಿಯಾದ ನ್ಯೂಯಾರ್ಕ್-ನವದೆಹಲಿ ವಿಮಾನದಲ್ಲಿ ಮಹಿಳೆ ಮೇಲೆ ಸಹ ಪ್ರಯಾಣಿಕ ಶಂಕರ್, ಮೂತ್ರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇತ್ತೀಚೆಗೆ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಕುರಿತಂತೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ಶಂಕರ್, ‘ನಾನು ಆರೋಪಿಯಲ್ಲ. ಬೇರೆ ಯಾರೋ ಮಾಡಿರಬಹುದು ಅಥವಾ ಮಹಿಳೆಯೇ ಮೂತ್ರ ಮಾಡಿಕೊಂಡಿರಬೇಕು. ಆಕೆ ಪ್ರಾಸ್ಟೇಟ್‌ಗೆ ಸಂಬಂಧಿಸಿದ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಕೆಯ ಸೀಟ್ ಬಳಿಗೆ ಯಾರೂ ಹೋಗದಂತಹ ಸ್ಥಿತಿ ಇತ್ತು’ಎಂದು ಹೇಳಿದ್ದಾರೆ.
‘ಅವರ ಆಸನವನ್ನು ಹಿಂದಿನಿಂದ ಮಾತ್ರ ಸಂಪರ್ಕಿಸಬಹುದಾಗಿತ್ತು, ಯಾವುದೇ ಸಂದರ್ಭದಲ್ಲಿ ಮೂತ್ರವು ಸೀಟಿನ ಮುಂಭಾಗದ ಪ್ರದೇಶಕ್ಕೆ ತಲುಪಲು ಸಾಧ್ಯವಿರಲಿಲ್ಲ. ಅಲ್ಲದೆ, ದೂರುದಾರರ ಹಿಂದೆ ಕುಳಿತಿದ್ದ ಪ್ರಯಾಣಿಕರು ಅಂತಹ ಯಾವುದೇ ದೂರು ನೀಡಿಲ್ಲ’ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರೋಪಿಯನ್ನು ಕಸ್ಟಡಿಗೆ ನೀಡಬೇಕೆಂದು ಕೋರಿ ದೆಹಲಿ ಪೊಲೀಸರು ಸಲ್ಲಿಸಿರುವ ಮನವಿ ಆಲಿಸುತ್ತಿದ್ದ ನ್ಯಾಯಾಧೀಶರ ಎದುರು ವಕೀಲರು ಈ ವಾದ ಮಂಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.