ಶಶಿ ತರೂರ್ ಬಣ ಬಿಜೆಪಿ ಸೇರುತ್ತದೆ ಎಂಬ ಅಸ್ಸಾಂ ಮುಖ್ಯಮಂತ್ರಿ ಹಿಮವಂತ್ ಬಿಸ್ವಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಸಲ್ಮಾನ್ ಅನೀಸ್, ತಾನು ಕೂಡ ಶಶಿ ತರೂರ್ಗೆ ಮತ ಹಾಕಿದ್ದು ಯಾವುದೇ ಕಾರಣಕ್ಕೆ ಬಿಜೆಪಿ ಸೇರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅನೀಸ್, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಶಶಿ ತರೂರ್ಗೆ ಮತ ಹಾಕಿರುವ 1072 ಮಂದಿಯಲ್ಲಿ ನಾನು ಒಬ್ಬ. ನಾವು ಸೋತಿದ್ದೇವೆ. ಆದರೆ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಗೆದ್ದಿದೆ. ಕೇವಲ ಬಿಜೆಪಿ ಒಂದೇ ಉಳಿದುಕೊಂಡರು ಕೂಡ ಆ ಪಕ್ಷ ಸೇರುವುದಿಲ್ಲ. ಅದು ಸಾಕಷ್ಟು ಮತಾಂಧರು, ಹೇಡಿಗಳು ಮತ್ತು ಅವಕಾಶವಾದಿಗಳನ್ನು ಹೊಂದಿರುವ ಪಕ್ಷ ಎಂದಿದ್ದಾರೆ.

ಜೈರಾಂ ರಮೇಶ್ ಪ್ರತಿಕ್ರಿಯಿಸಿ ಹಿಮವಂತ್ ರೀತಿಯ ಬಕ್ವಾಸ್ಗಳಿಗೆ ಯಾವುದೇ ಮಿತಿಯಿಲ್ಲ ಎಂದಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸ್ಸಾ ಮುಖ್ಯಮಂತ್ರಿ ಹಿಮವಂತ್ ಬಿಸ್ವಾ ಶಶಿ ತರೂರ್ಗೆ ಮತ ಚಲಾಯಿಸಿದ್ದ 1000 ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರುತ್ತಾರೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.