ಗುರುವಾರ , ಮಾರ್ಚ್ 30, 2023
24 °C
ಗೂಢಚಾರಿಕೆ ಪ್ರಕರಣ: ಕೇರಳ ಮಾಜಿ ಡಿಜಿಪಿ ಮ್ಯಾಥ್ಯೂ ಹೇಳಿಕೆ

ಇಸ್ರೊ ವಿಜ್ಞಾನಿ ನಾರಾಯಣನ್‌ ಬಂಧಿಸುವಂತೆ ಐಬಿ ಒತ್ತಡ ಇತ್ತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ‘1984ರಲ್ಲಿ ಸದ್ದು ಮಾಡಿದ್ದ ಗೂಢಚಾರಿಕೆ ಪ್ರಕರಣದಲ್ಲಿ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಬಂಧಿಸುವಂತೆ ನನ್ನ ಹಾಗೂ ಕೇರಳದ ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲೆ ಇಂಟೆಲಿಜೆನ್ಸ್‌ ಬ್ಯೂರೊದ (ಐಬಿ) ಒತ್ತಡವಿತ್ತು’ ಎಂದು ಕೇರಳದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್‌ ಹೇಳಿದ್ದಾರೆ.

ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಇಲ್ಲಿನ ಪ್ರಧಾನ ಸೆಷನ್ಸ್‌ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಅವರು ಈ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.

ಮ್ಯಾಥ್ಯೂ ಅವರ ಅರ್ಜಿಯ ವಿಚಾರಣೆ ಬುಧವಾರ ನಡೆಯುವ ಸಾಧ್ಯತೆ ಇದೆ.

ಮ್ಯಾಥ್ಯೂ ಹಾಗೂ ಇತರ 17 ಜನರ ವಿರುದ್ಧ ಕ್ರಿಮಿನಲ್‌ ಪಿತೂರಿ, ಅಪಹರಣ, ಸಾಕ್ಷ್ಯಗಳ ತಿರುಚುವಿಕೆ ಸೇರಿದಂತೆ ವಿವಿಧ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳಡಿ ಸಿಬಿಐ ಪ್ರಕರಣ ದಾಖಲಿಸಿದೆ.

‘ಗೂಢಚಾರಿಕೆ ಆರೋಪಗಳ ಕುರಿತು ಕೇಂದ್ರೀಯ ಸಂಸ್ಥೆಗಳಿಂದ ಸಮಗ್ರವಾದ ತನಿಖೆ ಅಗತ್ಯ ಇತ್ತು. ಹೀಗಾಗಿ ನಾನೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಶಿಫಾರಸು ಮಾಡಿದ್ದೆ’ ಎಂದು ಮ್ಯಾಥ್ಯೂ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು