ಶುಕ್ರವಾರ, ಸೆಪ್ಟೆಂಬರ್ 24, 2021
27 °C

ದೆಹಲಿ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ, ಬಿಗಿ ಭದ್ರತೆ

ಪ್ರಜಾವಾಣಿ ವೆಬ್‌‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

PTI

ನವದೆಹಲಿ: ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಐಜಿಐ)ಕ್ಕೆ ಬಾಂಬ್‌ ಬೆದರಿಕೆ ಹಿನ್ನೆಲೆ ಬಿಗಿ ಭದ್ರತೆ ಒದಗಿಸಲಾಗಿದೆ. 'ಭದ್ರತಾ ಕಾರ್ಯಾಚರಣೆ ನಿರ್ವಹಣೆ ಕೇಂದ್ರ'ದಿಂದ ಪೂರಕ ಏಜೆನ್ಸಿಗಳಿಗೆ ತುರ್ತು ಎಚ್ಚರಿಕೆ ರವಾನೆಯಾಗಿದೆ.

ದೆಹಲಿ ವಿಮಾನ ನಿಲ್ದಾಣಕ್ಕೆ ಶನಿವಾರ ಬಾಂಬ್‌ ಬೆದರಿಕೆಯುಳ್ಳ ಇ-ಮೇಲ್‌ ಬಂದಿದೆ, ಅದರಲ್ಲಿ ಅಲ್‌ ಕೈದಾ ಉಗ್ರರು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಸಂದೇಶವಿದೆ ಎಂದು 'ಎಎನ್ಐ' ಟ್ವೀಟ್‌ ಮಾಡಿದೆ.

1-3 ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಲು ಉಗ್ರರ ಗುಂಪು ಯೋಜನೆ ರೂಪಿಸಿರುವ ಕುರಿತು ಐಜಿಐ ಪೊಲೀಸ್‌ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

'ಶನಿವಾರ, ದಿಲ್ಲಿ ವಿಮಾನ ನಿಲ್ದಾಣದ ಪೊಲೀಸ್‌ ಠಾಣೆಯಿಂದ ವಿಮಾನ ಹಾರಾಟ ನಿಯಂತ್ರಣ ಕೇಂದ್ರ(ಎಒಸಿಸಿ) ಕ್ಕೆ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸುವ ಬೆದರಿಕೆಯುಳ್ಳ ಇ-ಮೇಲ್‌ ಸ್ವೀಕರಿಸಲಾಗಿದೆ. ಅಲ್‌ ಕೈದಾ ಸರ್ಗಾನಾ ಉಗ್ರರು ಬಾಂಬ್‌ ಇರಿಸಲು ಯೋಜನೆ ರೂಪಿಸಿರುವ ಬಗ್ಗೆ ಸಂದೇಶವಿದೆ. ಸಿಂಗಪುರದಿಂದ ಕರಣ್‌ಬಿರ್‌ ಸುರಿ ಅಲಿಯಾಸ್‌ ಮೊಹಮದ್‌ ಜಲಾಲ್‌ ಮತ್ತು ಆತನ ಪತ್ನಿ ಶೈಲಿ ಶರ್ದಾ ಅಲಿಯಾಸ್‌ ಹಸೀನಾ ಭಾನುವಾರ ದೆಹಲಿಗೆ ಬರುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ 1-3 ದಿನಗಳಲ್ಲಿ ಬಾಂಬ್‌ ಇರಿಸುವ ಕುತಂತ್ರ ನಡೆದಿದೆ' ಎಂದು ಐಜಿಐ ಪೊಲೀಸ್‌ ತಿಳಿಸಿರುವುದಾಗಿ ಎಎನ್ಐ ಟ್ವೀಟ್‌ನಲ್ಲಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು