ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಕೆ ಪ್ರಧಾನಿಯಾಗಿ ಅಬ್ದುಲ್ ಕಯ್ಯುಮ್ ನಿಯಾಜಿ ನೇಮಕ

Last Updated 4 ಆಗಸ್ಟ್ 2021, 12:53 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಪಕ್ಷದ ಶಾಸಕರಾದ ಅಬ್ದುಲ್ ಕಯ್ಯುಮ್ ನಿಯಾಜಿಯವರನ್ನು ದೀರ್ಘ ಸಮಾಲೋಚನೆಯ ನಂತರ ಪಾಕ್ ಆಕ್ರಮಿತ ಕಾಶ್ಮೀರದ ಮುಂದಿನ ಪ್ರಧಾನಿಯಾಗಿ ಬುಧವಾರ ನೇಮಿಸಿದ್ದಾರೆ.

ಅಬ್ಬಾಸ್ ಪುರ್-ಪೂಂಚ್ ಪ್ರದೇಶದಿಂದ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿಯಾಜಿ ಗೆಲುವು ಸಾಧಿಸಿದ್ದರು.

ಖಾನ್ ಅವರ ಪಾಕಿಸ್ತಾನ್‌ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು 53 ಸದಸ್ಯ ಬಲದ ಸದನದಲ್ಲಿ 32 ಸ್ಥಾನಗಳನ್ನು ಪಡೆದುಕೊಂಡಿದೆ. ಪಿಒಕೆಯಲ್ಲಿ ಪಿಟಿಐ, ಇದೇ ಮೊದಲ ಬಾರಿಗೆ ಸರ್ಕಾರ ರಚಿಸುತ್ತಿದೆ.

ಪಿಒಕೆಯಲ್ಲಿ ನಡೆದ ಇತ್ತೀಚಿನ ಚುನಾವಣೆಯನ್ನು ಭಾರತ ತಿರಸ್ಕರಿಸಿದೆ. ಈ ಬಗ್ಗೆ ತೀವ್ರ ಪ್ರತಿಭಟನೆ ದಾಖಲಿಸಿರುವ ಭಾರತವು, ಪಾಕಿಸ್ತಾನದ ಈ ಕ್ರಮ ತನ್ನ ಅನಧಿಕೃತ ಅತಿಕ್ರಮಣವನ್ನು ಮರೆಮಾಚುವ ಪ್ರಯತ್ನವಲ್ಲದೇ ಮತ್ತೇನು ಅಲ್ಲ ಎಂದು ಟೀಕಿಸಿದೆ.

ಪಿಒಕೆಯಲ್ಲಿನ ಚುನಾವಣೆ ಬಗ್ಗೆ ಕಟುವಾದ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪಾಕಿಸ್ತಾನವು ಭಾರತೀಯ ಭೂಪ್ರದೇಶಗಳ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ. ಅದು ತನ್ನ ಕಾನೂನುಬಾಹಿರ ಆಕ್ರಮಣದಲ್ಲಿರುವ ಎಲ್ಲಾ ಭಾರತೀಯ ಪ್ರದೇಶಗಳನ್ನು ಖಾಲಿ ಮಾಡಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT