ಬುಧವಾರ, ಏಪ್ರಿಲ್ 21, 2021
24 °C

ಕೋಲ್ಕತ್ತದಲ್ಲಿ ಮಕ್ಕಳಿಗಾಗಿ ದೋಣಿ ಗ್ರಂಥಾಲಯ ಪ್ರಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಮೊದಲ ಬಾರಿ ದೋಣಿಯಲ್ಲಿ ಮಕ್ಕಳ ಗ್ರಂಥಾಲಯವನ್ನು ಪ್ರಾರಂಭಿಸಲಾಗಿದೆ.

ಪಶ್ಚಿಮ ಬಂಗಾಳ ಸಾರಿಗೆ ನಿಗಮವು ಸ್ಥಳೀಯ ಪಾರಂಪರಿಕ ಪುಸ್ತಕದ ಅಂಗಡಿಯ ಸಹಯೋಗದೊಂದಿಗೆ ಈ ಗ್ರಂಥಾಲಯವನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹೂಗ್ಲಿ ನದಿಯಲ್ಲಿ ದೋಣಿಯ ಮೂಲಕ ಪ್ರಯಣಿಸುತ್ತಾ ಕೋಲ್ಕತ್ತದ ಸೌಂದರ್ಯವನ್ನು ವೀಕ್ಷಿಸುವುದರ ಜತೆಗೆ ಪುಸ್ತಕವನ್ನು ಓದಬಹುದು ಎಂಬ ಕಾರಣಕ್ಕಾಗಿ ಈ ಗ್ರಂಥಾಲಯವನ್ನು ತೆರೆಯಲಾಗಿದೆ’ ಎಂದು ಅವರು ಹೇಳಿದರು.

‘ಈ ಗ್ರಂಥಾಲಯಕ್ಕೆ ‘ಯಂಗ್‌ ರೀಡರ್ಸ್‌ ಬೋಟ್‌ ಲೈಬ್ರರಿ’ ಎಂದು ಹೆಸರಿಡಲಾಗಿದೆ. ಇಲ್ಲಿ ಮಕ್ಕಳಿಗಾಗಿ ಇಂಗ್ಲಿಷ್‌ ಮತ್ತು ಬಂಗಾಳಿ ಭಾಷೆಯ 500 ಪುಸ್ತಕಗಳನ್ನು ಇಡಲಾಗಿದೆ. ಈ ದೋಣಿ ಗ್ರಂಥಾಲಯವು ಜನರಿಗೆ ಮೂರು ಗಂಟೆಗಳ ಕಾಲ ಪ್ರವಾಸವನ್ನೂ ಕೈಗೊಳ್ಳಬಹುದು’ ಎಂದು ಅವರು ಮಾಹಿತಿ ನೀಡಿದರು.

‘ಮಿಲೇನಿಯಂ ಪಾರ್ಕ್‌ನಿಂದ ಆರಂಭಗೊಂಡ ಪಯಣವು ಬೇಲೂರು ಮಠ ಜೆಟ್ಟಿವರೆಗೆ ಹೋಗಿ, ಅಲ್ಲಿಂದ ಹಿಂದಕ್ಕೆ ಮರಳಲಿದೆ. ವಾರಾಂತ್ಯದಲ್ಲಿ ಮೂರು ಬಾರಿ ಈ ಗ್ರಂಥಾಲಯವು ಚಲಿಸಲಿದೆ. ಇಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಬೋಟ್‌ನಲ್ಲಿ ಪ್ರಯಾಣಿಸುವ ವಯಸ್ಕರಿಗೆ ₹100 ಮತ್ತು ಮಕ್ಕಳಿಗೆ ₹50 ಶುಲ್ಕ ನಿಗದಿಪಡಿಸಲಾಗಿದೆ. ಅಲ್ಲದೆ ಗ್ರಂಥಾಲಯದಲ್ಲಿ ಕಥೆ ಹೇಳುವುದು, ಕವನ ವಾಚನ, ಪುಸ್ತಕ ಬಿಡುಗಡೆ ಮತ್ತು ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳೂ ನಡೆಯಲಿವೆ’ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು