ಗುರುವಾರ , ಮಾರ್ಚ್ 23, 2023
30 °C
ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ ಟ್ವಿಟರ್

ಭಾರತದಲ್ಲಿನ ಕುಂದುಕೊರತೆ ಅಧಿಕಾರಿ ನೇಮಕ ಅಂತಿಮ ಹಂತದಲ್ಲಿ –ಟ್ವಿಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani
ನವದೆಹಲಿ: ‘ಟ್ವಿಟರ್‌ನ ಭಾರತದ ಸ್ಥಳೀಯ ಕುಂದುಕೊರತೆ ಅಧಿಕಾರಿ ನೇಮಕವು ಅಂತಿಮ ಹಂತದಲ್ಲಿದೆ’ ಎಂದು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್‌ ಇಂಡಿಯಾ ಶನಿವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
 
‘ಐಟಿ ನಿಯಮಗಳಿಗೆ ಅನುಸಾರವಾಗಿ ಮಧ್ಯಂತರ ಅಹವಾಲು ಅಧಿಕಾರಿಯನ್ನು ನೇಮಿಸಲಾಗಿತ್ತು. ಆದರೆ, ಅವರ ನೇಮಕಾತಿಯ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸುವ ಮುನ್ನವೇ ಅವರು ಜೂನ್ 21ರಂದು ತಮ್ಮ ಹುದ್ದೆಯಿಂದ ಹಿಂದೆ ಸರಿದರು’ ಎಂದೂ ಹೈಕೋರ್ಟ್‌ಗೆ ಸಲ್ಲಿಸಿರುವ ಉತ್ತರದಲ್ಲಿ ಟ್ವಿಟರ್ ಮಾಹಿತಿ ನೀಡಿದೆ.
 
‘ಟ್ವಿಟರ್ ಭಾರತದ ಸ್ಥಳೀಯ ಕುಂದುಕೊರತೆ ಅಧಿಕಾರಿಯ ನೇಮಕವು ಅಂತಿಮ ಹಂತದಲ್ಲಿದೆ. ಈ ಮಧ್ಯೆ ಭಾರತೀಯ ಬಳಕೆದಾರರ ಕುಂದುಕೊರತೆಗಳನ್ನು ಮತ್ತೊಬ್ಬ ಕುಂದುಕೊರತೆ ಅಧಿಕಾರಿ ಪರಿಹರಿಸುತ್ತಿದ್ದಾರೆ’ ಎಂದೂ ಟ್ವಿಟರ್ ತಿಳಿಸಿದೆ.
 
ಟ್ವಿಟರ್ ಭಾರತದ ಹೊಸ ಐಟಿ ನಿಯಮಗಳ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಆಧರಿಸಿ ಹೈಕೋರ್ಟ್‌ ಟ್ವಿಟರ್‌ಗೆ ನೋಟಿಸ್ ನೀಡಿತ್ತು. ಜುಲೈ 6ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು