ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಗಡಿಯಲ್ಲಿ ವಿವಾದ: ಸೇನಾ ಕಮಾಂಡರ್ ಹಂತದಲ್ಲಿ ಮಾತುಕತೆ

Last Updated 1 ಸೆಪ್ಟೆಂಬರ್ 2020, 10:55 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಮೂಡಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ಕ್ರಮವಾಗಿ ಸೇನಾ ಕಮಾಂಡರ್‌ಗಳ ಹಂತದಲ್ಲಿ ಮಂಗಳವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಿತು.

ಪೂರ್ವ ಲಡಾಖ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಭಾರತೀಯ ಭೂಭಾಗದಲ್ಲಿ ಇರುವ ಚುಶುಲ್ ನಲ್ಲಿ ಮಾತುಕತೆ ನಡೆದಿದ್ದು, ಪಾಂಗಾಂಗ್ ಸರೋವರ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾಂಗಾಂಗ್ ಸರೋವರ ಸಮೀಪ ಯಥಾಸ್ಥಿತಿಯಯನ್ನು ಉಲ್ಲಂಘಿಸಲು ಚೀನಾ ಸೈನಿಕರು ಮುಂದಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಚೀನಾ ಸೇನೆಯು ಮತ್ತೊಮ್ಮೆ ಯಥಾಸ್ಥಿತಿ ನಿಯಮ ಉಲ್ಲಂಘಿಸಿ, ಗಡಿ ಭಾಗದತ್ತ ಮುಂದುವರಿದಿತ್ತು. ಆದರೆ, ಈ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು.

ಉಭಯ ಮುಖಂಡರ ನಡುವೆಸೋಮವಾರ ಸುಮಾರು ಆರು ಗಂಟೆ ಕಾಲ ಮಾತುಕತೆ ನಡೆದಿದ್ದರೂ, ಯಾವುದೇ ಫಲಶ್ರುತಿ ಹೊರಬಿದ್ದಿರಲಿಲ್ಲ.

ಚೀನಾ ಸೇನಯಈ ಯತ್ನದಿಂದಾಗಿ ಭಾರತೀಯ ಸೇನೆಯು ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಿದೆ. ಸೇನೆ ಮುಖ್ಯಸ್ಥ ಎಂ.ಎಂ.ನರವಣೆಅವರೇ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT