ಶನಿವಾರ, ಫೆಬ್ರವರಿ 27, 2021
30 °C

ಬಾಂಗ್ಲಾದೇಶ, ನೇಪಾಳಕ್ಕೆ ಭಾರತದ ಕೋವಿಶೀಲ್ಡ್ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತವು ಕೋವಿಶೀಲ್ಡ್‌ ಕೋವಿಡ್–19 ಲಸಿಕೆಯನ್ನು ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಗುರುವಾರ ರವಾನಿಸಿದೆ. ಈ ಮಾಹಿತಿಯನ್ನು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಅವರು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ.

ಭಾರತದ ಸೀರಂ ಸಂಸ್ಥೆಯ ಒಟ್ಟು 20 ಲಕ್ಷ ಡೋಸ್‌ ಕೋವಿಶೀಲ್ಡ್‌ ಲಸಿಕೆಯನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಂಗ್ಲಾದೇಶದ ಢಾಕಾಗೆ ರವಾನಿಸಲಾಗಿದೆ.

ಇದೇ ವೇಳೆ ಒಂದು ಲಕ್ಷ ಡೋಸ್‌ ಲಸಿಕೆಯನ್ನು ನೇಪಾಳಕ್ಕೆ ಕಳುಹಿಸಲಾಗಿದೆ. ಮಾಲ್ಡೀವ್ಸ್‌ ಹಾಗೂ ಭೂತಾನ್‌ಗೂ ಬುಧವಾರ ಲಸಿಕೆ ಕಳುಹಿಸಿಕೊಡಲಾಗಿದೆ.

‘ನೆರೆ ರಾಷ್ಟ್ರಗಳು ಮೊದಲು ನೀತಿಗೆ ಅನುಗುಣವಾಗಿ ಭೂತಾನ್‌, ಮಾಲ್ಡೀವ್ಸ್‌, ಬಾಂಗ್ಲಾದೇಶ, ನೇಪಾಳ ಮ್ಯಾನ್ಮರ್‌ ಮತ್ತು ಸೀಶೆಲ್ಸ್‌ಗೆ ಬುಧವಾರ ಲಸಿಕೆ ಕಳುಹಿಸಲಾಗುವುದು’ ಎಂದು ವಿದೇಶಾಂಗ ಸಚಿವಾಲಯವು ಮಂಗಳವಾರ ಪ್ರಕಟಿಸಿತ್ತು.

ಭಾರತ ಇದಕ್ಕೂ ಮೊದಲು ಹೈಡ್ರೋಕ್ಲೊರೊಕ್ವಿನ್‌, ರೆಮ್‌ಡೆಸಿವಿರ್‌ ಮತ್ತು ಪ್ಯಾರಾಸಿಟಮಲ್‌ ಮಾತ್ರೆಗಳು, ಡಯಾಗ್ನಾಸ್ಟಿಕ್‌ ಕಿಟ್‌, ವೆಂಟಿಲೇಟರ್ಸ್‌, ಮಾಸ್ಕ್‌, ಗ್ಲೌಸ್‌ ಹಾಗೂ ಇತರ ವೈದ್ಯಕೀಯ ಉಪಕರಣಗಳನ್ನು ಕೋವಿಡ್–19 ನಿಯಂತ್ರಣ ಸಲುವಾಗಿ ಹಲವು ರಾಷ್ಟ್ರಗಳಿಗೆ ಕಳುಹಿಸಿಕೊಟ್ಟಿದೆ.

ಲಸಿಕೆ ಢಾಕಾ ತಲುಪಿರುವುದನ್ನು ಖಚಿತಪಡಿಸಿರುವ ವಿದೇಶಾಂಗ ಸಚಿವ ಜೈಶಂಕರ್, ‘ಲಸಿಕೆ ಮೈತ್ರಿಯು ಬಾಂಗ್ಲಾದೇಶದೊಂದಿಗಿನ ಸಂಬಂಧಕ್ಕೆ ಭಾರತವು ಹೆಚ್ಚಿನ ಆಧ್ಯತೆ ನೀಡುತ್ತದೆ ಎಂಬುದನ್ನು ಖಾತ್ರಿಪಡಿಸಿದೆ’ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು